ಚಾಮರಾಜನಗರ:– ಜಿಲ್ಲೆಯ ಹನೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜಿನಕನಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ನಿಶಾಂತ್ ವಿರುದ್ದ ಸ್ಥಳೀಯ ಗ್ರಾಮಸ್ಥರು ಮತ್ತು ಕೆಲ ಬಿಜೆಪಿ ಕಾರ್ಯರ್ತರು ತಿರುಗಿದ್ದ ಬಿದ್ದ ಪ್ರಸಂಗ ಜರುಗಿದೆ.
ಈ ಹಿಂದೆ ನೆಡೆದಂತಹ ಚುನಾವಣಾಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೆ ಪ್ರಸ್ತುತ್ತ ಬಿಜೆಪಿ ಸಂಘಟನೆ ಮಾಡುತ್ತೇವೆ ಎಂದು ಗ್ರಾಮಕ್ಕೆ ಬಂದಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಿಶಾಂತ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಕ್ಷದ ಪರ ಕೆಲಸ ಮಾಡಬೇಕಾದೆ ಅಭಿಯಾನದಲ್ಲಿ ಪಾಲ್ಗೊಂಡಿದ್ದೀಯಾ ನಡೀ ಊರಿಂದ ಆಚೆ ಎಂದು ಓಡಿಸಿದ್ದಾರೆ.
ಸ್ಥಳೀಯ ಬಿಜೆಪಿಗರು ಹಾಗೂ ಮುಖಂಡರ ಗಲಾಟೆಗೆ ಹೆದರಿ ನಿಶಾಂತ ಅಲ್ಲಿಂದ ಜಾಗ ಮಾಡುವಂತಾಗಿದೆ. ಬಿಜೆಪಿ ಸದಸ್ಯ ಅಭಿಯಾನ ಇರಲಿ ಸದ್ಯಕ್ಕೆ ತಾನು ಬಚಾವಾದ್ರೆ ಸಾಕು ಅಂತ ನಿಶಾಂತ್ ಓಡಿಹೋದ ಘಟನೆ ನಡೆದಿದೆ.