ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.
ಬಿಜೆಪಿಯ ಡಾ.ಸುದಾಕರ್ ಜಯಗಳಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ.
ಅರುಣ್ ಕುಮಾರ್ (24) ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. 20 ಜನರ ತಂಡದಿಂದ ಅರುಣ್ ಕುಮಾರ್ ಕಾಲು ಮುರಿದು ಹಲ್ಲೆ ನಡೆಸಲಾಗಿದೆ. ಹೊಸಕೋಟೆ ತಾಲೂಕಿನ ಹುಳುವನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.
ಓಬಳಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತರಾದ ಕೃಷ್ಣಪ್ಪ, ಸುರೇಂದ್ರ, ರಘುವೀರ್, ಮಂಜುನಾಥ್, ಏಸುಕೃಷ್ಣ, ಕಿಟ್ಟಪ್ಪ, ಮನು,ಮಲ್ಲಿಕಾರ್ಜುನ್ ಸೇರಿ 20ಜನರ ತಂಡದಿಂದ ಹಲ್ಲೆ ನಡೆದಿದೆ.
ಗಾಯಾಳುವಿಗೆ ಎಂವಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಕೋಟೆಯ ನಂದಗುಡಿ ಪೋಲೀಸ್ ಠಾಣೆ ವ್ಯಾಪ್ತಿಲಿ ಘಟನೆ ಜರುಗಿದೆ.