ಕಲಬುರಗಿ : ಜಿಲ್ಲೆಯ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭಾರೀ ಆತಂಕ ಸೃಷ್ಟಿಸಿತ್ತು. ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ಚಂದ್ರಕಾಂತ ಪಾಟೀಲ್ ಸ್ಕೂಲ್ ಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಇದರಿಂದಾಗಿ ಶಾಲಾ ಆಡಳಿತ ಮಂಡಳಿ ತೀವ್ರ ಭಯಗೊಂಡಿದ್ದು, ಬಾಂಬ್ ಸ್ಪೋಟದ ಬೆದರಿಕೆ ಹಿನ್ನಲೆ ಮಕ್ಕಳನ್ನ ವಾಪಸ್ ಮನೆಗೆ ಕಳುಹಿಸಿದ್ದಾರೆ.
ಚಂದ್ರಕಾಂತ ಪಾಟೀಲ್ ಶಾಲೆ ಬಿಜೆಪಿ MLC ಬಿಜಿ ಪಾಟೀಲ್ ಒಡೆತನದಲ್ಲಿದ್ದು, ಬಾಂಬ್ ಸ್ಪೋಟಿಸುವ ಬೆದರಿಕೆ ಮೇಲ್ ತಮಿಳುನಾಡಿನಿಂದ ಬಂದಿದೆ ಎನ್ನಲಾಗುತ್ತಿದೆ. ಚಂದ್ರಕಾಂತ್ ಪಾಟೀಲ್ ಶಾಲೆಗೆ ಆಗಮಿಸಿದ ಬಾಂಬ್ ಸ್ಕ್ವಾಡ್ಸ್ ಭೇಟಿ ನೀಡಿದ್ದಾರೆ. ಅಶೋಕ ನಗರ ಠಾಣಾ ಪೊಲೀಸರು & ಬಾಂಬ್ ಸ್ಕ್ವಾಡ್ಸ್ ತೀವ್ರ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಶಾಲೆಗೆ ಭೇಟಿ ನೀಡಿದ ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಅವರು ಮಾತನಾಡಿ,
ಮೇಲ್ ನಲ್ಲಿ ತಮಿಳುನಾಡು ರಾಜಕೀಯದ ಬಗ್ಗೆ ಉಲ್ಲೆಖವಿದೆ.
ಇಡೀ ಶಾಲೆಯನ್ನು ಪರಿಶೀಲನೆ ಮಾಡಿದ್ದೀವಿ.
ಮೇಲ್ ಬಂದ ಹಿನ್ನೆಲೆ ದೂರು ದಾಖಲಿಸಿ ತನಿಖೆ ಮಾಡುತ್ತೇವೆ. ತಮಿಳು ಮೇಲ್ ಐಡಿಯಿಂದ ಮೇಲ್ ಬಂದಿದೆ.
ಯಾರು ಭಯ ಪಡೋ ಅಗತ್ತವಿಲ್ಲ ಎಂದಿದ್ದಾರೆ.