ಅಮೇರಿಕಾ: ಹಿಂದಿನ ಕಾಲದಲ್ಲೆಲ್ಲಾ ಮಕ್ಕಳ ಆಟದಲ್ಲಿ ಮೋಜಿರುತ್ತಿತ್ತು. ಅಷ್ಟೇ ಅಲ್ಲ ಶಿಸ್ತು ಸಹ ಇರುತ್ತಿತ್ತು. ಆಟವನ್ನು ಆಟದಂತೆ ನೋಡಿ ಖುಷಿಯಿಂದ ಕಾಲ ಕಳೆಯುತ್ತಿದ್ರು. ಆದ್ರೆ ಇವತ್ತಿನ ಕಾಲದ ಮಕ್ಕಳೋ ಆಟವನ್ನು ಸಹ ಚಾಲೆಂಜಿಂಗ್ ಆಗಿ ನೋಡ್ತಾರೆ. ಡೇಂಜರಸ್ ಆಟಗಳನ್ನು ನೋಡ್ತಾರೆ. ಸವಾಲ್ಗಳನ್ನು ಹಾಕಿ ಗದ್ದೇ ಗೆಲ್ಲಬೇಕು ಅನ್ನೋ ಷರತ್ತನ್ನೊಡ್ಡಿ ಆಟವಾಡ್ತಾರೆ. ಹೀಗೆ ಟಿಕ್ ಟಾಕ್ ಸವಾಲು ಸ್ವೀಕರಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿರುವುದು ವರದಿಯಾಗಿದೆ.ಸೋಷಿಯಲ್ ಮೀಡಿಯಾ ಬಂದ್ಮೇಲೆ ಎಲ್ಲವೂ ಬದಲಾಗಿದೆ.
ಜನರು ತಮಗರಿವಿಲ್ಲದೆಯೇ ಹಲವು ಅಪಾಯಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ವೀಡಿಯೋ ವೈರಲ್ ಮಾಡುವುದು, ಟ್ರೆಂಡ್ ಮಾಡುವುದು, ಚಾಲೆಂಜ್ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಒಬ್ಬರು ಚಾಲೆಂಜ್ ಹಾಕಿದರೆ, ಇನ್ನೊಬ್ಬರು ಆ ಚಾಲೆಂಜ್ನ್ನು ಸ್ವೀಕರಿಸಿ ಗೆಲ್ಲಲು ಸೂಚಿಸಲಾಗುತ್ತದೆ. ಹಾಗೆಯೇ ಟಿಕ್ ಟಾಕ್ ನ ಸವಾಲ್ ಸ್ವೀಕರಿಸಲು ಹೋದ ಬಾಲಕ (Boy) ಮೃತಪಟ್ಟಿದ್ದಾನೆ. ಜಾಕೋಬ್ ಸ್ಟೀವನ್ಸ್ (13) ಎನ್ನುವ ಬಾಲಕ ಹೀಗೆ ಸವಾಲನ್ನು (Challenge) ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಜಾಕೋಬ್ ಸ್ಟೀವನ್ಸ್ ಇತ್ತೀಚೆಗೆ ತನ್ನ ಸ್ನೇಹಿತರ ಜೊತೆ ಚಾಲೆಂಜ್ ಸ್ವೀಕರಿಸುವ ಟ್ರೆಂಡ್ ನಲ್ಲಿ ಭಾಗಿಯಾಗಿದ್ದಾನೆ. ಸ್ನೇಹೀತರು ಸವಾಲು ಹಾಕಿದ್ದರೆಂದು ಜಾಕೋಬ್ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ( ನಿದ್ರೆಬರಿಸುವ ಮಾತ್ರೆ) ಯನ್ನು ಸೇವಿಸಿದ್ದಾನೆ. ಇದು ಓವರ್ ಡೋಸ್ ಆಗಿ ಬಾಲಕ ಮೃತಪಟ್ಟಿದ್ದಾನೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ವೈದ್ಯರು ಸುಮಾರು ಒಂದು ವಾರದ ವರೆಗೆ ಚಿಕಿತ್ಸೆ (Treatment) ನೀಡಿದ್ದಾರೆ. ಆರು ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಬಾಲಕ ಕೊನೆಗೂ ಮೃತಪಟ್ಟಿದ್ದಾನೆ. ಈ ರೀತಿಯ ಘಟನೆ ಯಾರ ಜೀವನದಲ್ಲೂ ಆಗಬಾರದೆಂದು ಬಾಲಕನ ತಂದೆ ಜಸ್ಟಿನ್ ಸ್ಟೀವನ್ಸ್ ಹೇಳುತ್ತಾರೆ. ನನ್ನ ಮೊಮ್ಮಗನಿಗಾದ ಸ್ಥಿತಿ ಬೇರೆ ಯಾವುದೇ ಮಗುವಿಗೆ ಆಗುವುದು ಬೇಡ ಎಂದು ಬಾಲಕನ ಅಜ್ಜಿ ಹೇಳುತ್ತಾರೆ.