ಕೊರೊನಾ ಲಾಕ್ಡೌನ್ನ ಎಫೆಕ್ಟ್, ಆಫ್ಟರ್ ಎಫೆಕ್ಟ್ಗಳು ಒಂದೆರಡಲ್ಲ..! ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡ ಹಲವರು ಹೇಗೋ ಮಾಡಿ ಮತ್ತೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ, ಈ ರೀತಿ ಕೆಲಸ ಗಿಟ್ಟಿಸಿಕೊಂಡವರ ಪೈಕಿ ಪುರುಷರೇ ಹೆಚ್ಚು ಅನ್ನೋದು ಗಮನಾರ್ಹ ಸಂಗತಿ.. ಮಹಿಳೆಯರು, ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಕೆಲಸ ಕಳೆದುಕೊಂಡಿದ್ದಷ್ಟೇ ಅಲ್ಲ, ಮತ್ತೆ ಕೆಲಸಕ್ಕೆ ಸೇರಲಾಗದೆ, ಮಹಾ ನಗರಗಳಲ್ಲಿ ನೆಲೆ ಕಾಣಲಾಗದೆ ಪರಿತಪಿಸುತ್ತಿದ್ದಾರೆ..!
ಅದರಲ್ಲೂ ಮಹಿಳೆಯರು ವಾಪಸ್ ಮಹಾ ನಗರಗಳಿಗೆ ಬಂದು ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ.
ಹೌದು ಅದೇ ರೀತಿ ತೆಲಂಗಾಣದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಳೆ ಲೆಕ್ಚರರ್ ಕಥೆಯೊಂದನ್ನು ಹೇಳುತ್ತೇವೆ ಕೇಳಿ .. ಇವರಿಂದ ಎಷ್ಟೋ ಜನ ಮಹಿಳೆಯರಿಗೆ ಸ್ಪೂರ್ತಿ ಕೂಡ
ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ಮಂಡಲದ ಕಲ್ವಾಲಾ ಗ್ರಾಮದ ಜ್ಯೋತಿ. ಇವರು ಎಂಎ ಮತ್ತು ಬಿಇಡಿ ವಿದ್ಯಾಭ್ಯಾಸ ಮುಗಿಸಿದ್ದಾಳೆ. ಪತಿ ನವೀನ್ ಜತೆಗೂಡಿ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ಕನಸು ನನಸು ಮಾಡಿಕೊಂಡಿದ್ದಾಳೆ.
ಸರ್ಕಾರಿ ಉದ್ಯೋಗ ಪಡೆಯಲು ಬಿಡುವಿನ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಳು. ಕಳೆದ ವರ್ಷ ಆಗಸ್ಟ್ನಲ್ಲಿ ಜ್ಯೋತಿ ಅವರು ಟಿಜಿಟಿ, ಪಿಜಿಟಿ ಹಾಗೂ ಜೂನಿಯರ್ ಲೆಕ್ಚರರ್ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ವಾರದ ಹಿಂದೆ ಇವುಗಳ ಫಲಿತಾಂಶ ಬಂದಿದ್ದು ಪಿಜಿಟಿ ಫಲಿತಾಂಶದಲ್ಲಿ ಜ್ಯೋತಿಗೆ ಕೆಲಸ ಸಿಕ್ಕಿದೆ. ಹಾಗೂ ಇತ್ತೀಚೆಗೆ ಪ್ರಕಟವಾದ ಜೂನಿಯರ್ ಲೆಕ್ಚರರ್ ಹುದ್ದೆಗೂ ಆಯ್ಕೆಯಾಗಿದ್ದಾಳೆ.