ನವದೆಹಲಿ: ಬಸ್ ಕಂಡಕ್ಟರ್ ನಿಂದ ಅತ್ಯಾಚಾರವಾಗಿದೆ ಎಂದು ಆರೋಪ ಕೇಲೀಬಂದಿದೆ. ಹೌದು ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೆಹಲಿ ಸಾರಿಗೆ ನಿಗಮದ ಕಂಡಕ್ಟರ್ ಅನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ಉತ್ತರ ದೆಹಲಿಯ (New Delhi) ತಿಮಾರ್ಪುರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
2010 ರಿಂದ 2017 ರವರೆಗೆ ಡಿಟಿಸಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿದ್ದ ಸಂತ್ರಸ್ತ ಮಹಿಳೆ ಮಗುವಾದ ನಂತರ ಕೆಲಸ ಮಾಡುವುದನ್ನು ನಿಲ್ಲಿಸಿದ್ದಳು. ಎರಡು ವರ್ಷಗಳ ಹಿಂದೆ ಆರೋಪಿಯನ್ನು ಭೇಟಿಯಾಗಿ ಮತ್ತೆ ಕೆಲಸ ಕೊಡಿಸಲು ಮನವಿ ಮಾಡಿದ್ದಳು. ಮನೆಗೆ ಬಂದ ಆಕೆಗೆ ಜ್ಯೂಸ್ನಲ್ಲಿ ಮತ್ತು ಬರುವ ಮಾತ್ರೆ ಹಾಕಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಲಾಗಿದೆ ಎನ್ನಲಾಗಿದೆ.
ಅತ್ಯಚಾರದ ಬಳಿಕ ಆರೋಪಿ ಸ್ನೇಹಿತರ ಜೊತೆಗೆ ಸೇರಿಕೊಂಡು ಆಕೆಯ ಖಾಸಗಿ ವೀಡಿಯೋ ಮತ್ತು ಪೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಮತ್ತೆ ಸಂಪರ್ಕ ಹೊಂದಲು ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಮಹಿಳೆ ಆರೋಪಿಯ ಸ್ನೇಹಿತನೊಬ್ಬರಿಗೆ ತಿಳಿಸಿದಾಗ, ಅವನು ಫೋಟೋಗಳನ್ನು ಡಿಲಿಟ್ ಮಾಡುವ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿರಂತರ ಶೋಷಣೆ ಹಿನ್ನೆಲೆ ಮಹಿಳೆ ದೂರು ನೀಡಿದ್ದಾಳೆ.
ಈ ಪ್ರಕರಣದಲ್ಲಿ ನಾಲ್ಕೈದು ಮಂದಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಮುಖ ಆರೋಪಿ ಬಂಧಿತನಾಗಿದ್ದು, ಇತರ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.