ಆತ ಉದ್ಯಮಿ.. ಆರ್ಥಿಕವಾಗಿ ಸದೃಢನಾಗಿದ್ದ ಆತನಿಗೆ ವಿದ್ಯಾವಂತ ಮಗಳು.. ಎಂಬಿಬಿಎಸ್ ಮುಕ್ತಾಯದ ಹಂತದಲ್ಲಿದ್ದ ಮಗಳಿಗೆ ತನ್ನದೇ ಆದ ಆಸ್ಪತ್ರೆ ತೆರೆಯೋ ಕನಸು ಕಂಡಿದ್ದ.. ಹೀಗೆ ಉದ್ಯಮ, ಆಸ್ಪತ್ರೆಯಂತ ಕನಸು ಕಂಡಿದ್ದ ಆತ ನೆನ್ನೆ ಜಿಮ್ ಗೆ ತೆರಳಿದವನು ನಾಪತ್ತೆಯಾಗಿದ್ದ.. ಇಡಿ ಕುಟುಂಬ ಆತನ ಹುಡುಕಾಟದಲ್ಲಿದ್ರೆ, ಇತ್ತ ಆಸ್ಪತ್ರೆ ಕಟ್ಟೊ ತಯಾರಿಯಲ್ಲಿದ್ದ ತನ್ನದೇ ಕಟ್ಟಡದಲ್ಲಿ ಆತ ಕೊಲೆಯಾಗಿದ್ದ..
ಈ ಫೋಟೊದಲ್ಲಿರುವ ಈತನ ಹೆಸರು ಲಿಯಾಖತ್.. ವಯಸ್ಸು 44.. ಜಿಮ್ ವರ್ಕೌಟ್ ಅಂತ ಫಿಟ್ ಆಗಿದ್ದ ಈತ ಒಳ್ಳೆ ಉದ್ಯಮಿ.. ಜಾಹಿರಾತು ಪ್ರಿಂಟಿಂಗ್ ಏಜೆನ್ಸಿ ಸೇರಿದಂತೆ ಎರಡು ಉದ್ಯಮ ಹೊಂದಿದ್ದ ಈತ ಆರ್ಥಿಕವಾಗಿ ಸದೃಢವಾಗಿದ್ದ.. ಪ್ರತಿದಿನ ಸಂಜೆ ಆದ್ರೆ ಸಾಕು ಜಿಮ್ ಗೆ ತೆರಳುತಿದ್ದ ಆತ ನೆನ್ನೆ ಜಿಮ್ ಗೆಂದು ಹೋದವನು ತಡರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.. ಕಾಲ್ ಮಾಡಿದ್ರೆ ಫೋನ್ ರಿಂಗ್ ಆದ್ರೂ ಪಿಕ್ ಮಾಡುತ್ತಿರಲಿಲ್ಲ.. ಅನುಮಾನಗೊಂಡು ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ತನ್ನದೇ ಮತ್ತೋಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.. ಅದು ಬರ್ಬರವಾಗಿ ಕೊಲೆಯಾಗಿದ್ದ..
ಹೌದು, ನಾಯಂಡಹಳ್ಳಿಯ ಚೆಟ್ಟೀಸ್ ಪೆಟ್ರೊಲ್ ಬಂಕ್ ಬಳಿಯ ಖಾಲಿ ಮನೆಯಲ್ಲಿ ಲಿಯಾಖತ್ ಬರ್ಬರ ಹತ್ಯೆಯಾಗಿದೆ.. ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.. ಇನ್ನು ಲಿಯಾಖತ್ ಗೆ ಒಂದು ಹೆಣ್ಣು ಮತ್ತೊಂದು ಗಂಡು ಮಕ್ಕಳಿದ್ದಾರೆ.. ಅದರಲ್ಲಿ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ.. ಇನ್ನೇನು ವಿದ್ಯಾಬ್ಯಾಸ ಮುಗಿಯುತ್ತೆ.. ಆಕೆಗೆಂದು ಆಸ್ಪತ್ರೆ ತೆರೆಯಬೇಕು ಅಂದು ಕೊಂಡಿದ್ದ ಆತ ನ್ಯಾಯಂಡಹಳ್ಳಿಯ ಇದೇ ಕಟ್ಟಡ ಹೊಡೆದು ಆಸ್ಪತ್ರೆ ಕಣ್ಣೋ ಕನಸು ಕಂಡಿದ್ದ.. ದುರಂತ ಅಂದ್ರೆ ನಾಪತ್ತೆಯಾಗಿದ್ದ ಲಿಯಾಖತ್ ಅದೇ ಕಟ್ಟಡದ ರೂಂವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ..
ಸಲಿಗೆ ನಾಪತ್ತೆಯಾದ ಲಿಯಾಖತ್ ಗೆ ಅದೊಬ್ಬ ವ್ಯಕ್ತಿ ಇರೆ ಮಾಡಿ ರಾತ್ರಿ ಈ ಜಾಗಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.. ಅದರಂತೆ ತನ್ನ ಜಾವಾ ಬೈಕ್ ನಲ್ಲಿ ಬಂದ ಲಿಯಾಖತ್ ಒಳಗೆ ತೆರಳಿದ್ದಾನೆ.. ಈ ವೇಳೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು ಪರಿಚಯಸ್ಥರೇ ಕೊಲೆ ಮಾಡಿರೋ ಅನುಮಾನ ಮೂಡಿದೆ.. ಇನ್ನು ಕೆಲವರಿಗೆ ಕಷ್ಟ ಅಂತ ಲಿಯಾಖತ್ ಲಕ್ಷ ಲಕ್ಷ ಹಣ ನೀಡಿದ್ದರಂತೆ.. ಹಣ ಪಡೆದವರು ವಾಪಾಸು ಮಾಡದೇ ತಕರಾರು ಮಾಡಿದ್ದರಂತೆ.. ಇನ್ನು ಇದೇ ವಿಚಾರವಾಗಿ ಲಿಯಾಖತ್ ಪ್ರಶ್ನೆ ಸಹ ಮಾಡಿದ್ದರಂತೆ.. ಹೀಗಾಗಿ ಅವರೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ..
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ.. ಮೇಲ್ನೋಟಕ್ಕೆ ಹಣದ ವಿಚಾರದ ಕೊಲೆಯ ಶಂಕೆ ಇದ್ರು ಬೇರೆ ವಿಚಾರಕ್ಕೆ ಕೊಲೆಯಾಗಿರು ಅನುಮಾನ ಸಹ ಮೂಡಿದೆ.. ಹೀಗಾಗಿ ಸದ್ಯ ಕೃತ್ಯ ಎಸಗಿದ ಆರೋಪಿಗಳಿಗಾಗಿ ಖಾಕಿ ಬಲೆ ಬೀಸಿದ್ದು, ಆರೋಪಿಗಳ ಬಂಧನದ ಬಳಿಕವಷ್ಟೇ ಕೊಲೆಯ ಹಿಂದಿನ ರಹಸ್ಯ ಬಯಲಾಗಬೇಕಿದೆ..