ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ರನ್ನು ಹೊಗಳಿದ್ದಕ್ಕೆ ವ್ಯಕ್ತಿಯನ್ನು ಕ್ಯಾಬ್ ಚಾಲಕ ಬರ್ಬರವಾಗಿ ಹತ್ಯೆ ಮಾಡಿ ಘಟನೆ ಉತ್ತರಪ್ರದೇಶದ ಮಿರ್ಜಾಪುರ್ (Mirzapur) ನಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ರಾಜೇಶ್ ಧಾರ್ ದುಬೆ ಎಂದು ಗುರುತಿಸಲಾಗಿದೆ. ಮಿರ್ಜಾಪುರ್ ಜಿಲ್ಲೆಯ ಚನ್ಬೆಯ ನಿವಾಸಿ ಅಮ್ಜದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು..?: ಮೃತ ರಾಜೇಶ್ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ಸಂದರ್ಭದಲ್ಲಿ ವಬಾಹನದಲ್ಲಿದ್ದ ಇತರೆ ಪ್ರಯಾಣಿಕರ ಜೊತೆ ರಾಜಕೀಯದ ಬಗ್ಗೆ ಚರ್ಚೆ ನಡೆಸಿಕೊಂಡು ಬಂದಿದ್ದಾರೆ. ಹೀಗೆ ಚರ್ಚೆಯ ವೇಳೆ ರಾಜೇಶ್, ಮೋದಿ ಹಾಗೂ ಯೋಗಿಯನ್ನು ಹಾಡಿ ಹೊಗಳಿದ್ದಾರೆ.
ಇದರಿಂದ ಸಿಟ್ಟುಗೊಂಡ ಕ್ಯಾಬ್ ಚಾಲಕ ಅಮ್ಜದ್, ರಾಜೇಶ್ ಹೊಗಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ರಾಜೇಶ್, ಮೋದಿ, ಯೋಗಿ ಬಗ್ಗೆ ಮತ್ತೆ ಹೊಗಳಿ ಮಾತನಾಡಲು ಶುರು ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅಮ್ಜದ್, ರಾಜೇಶ್ನನ್ನು ವಾಹನದಿಂದ ತಳ್ಳಿದ್ದಾನೆ.
ಶೀ ವೇಳೆ ವಾಹನದ ಸೈಡ್ ಮಿರರ್ ಹಿಡಿದು ಒಳಗೆ ಬರಲು ರಾಜೇಶ್ ಪ್ರಯತ್ನಿಸಲು ಮುಂದಾದಾಗ ಚಾಲಕ ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಪರಿಣಾಮ ವಾಹನದಡಿ ಸಿಲುಕಿ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಕೊಲೆ ನಡೆದ ಸುದ್ದಿ ಹಬ್ಬುತ್ತಿದ್ದಂತೆಯೇ ಸಾರ್ವಜನಿಕರು ಪ್ರಯಾಗ್ರಾಜ್-ಮಿರ್ಜಾಪುರ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ವಗ್ರಾಮದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.