ನಟಿ ಆಗಬೇಕೆಂಬ ಕನಸು ಕಂಡಿದ್ದ ಯುವತಿಯೊಬ್ಬಳು ಮೋಸದ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಹೇಳಿಕೊಂಡು ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ಯುವತಿಯಿಂದ ಹಣ ಸುಲಿಗೆ ಮಾಡಿದ್ದಾನೆ.
ರಜನಿಕಾಂತ್ ನಟನೆಯ ಹೊಸ ಸಿನಿಮಾ Thalaiver 171- code red ಪಾತ್ರವೊಂದು ಖಾಲಿ ಇದೆ ಎಂದು ಸುರೇಶ್ ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್ನನ್ನು ಸಂಪರ್ಕ ಮಾಡಿದ್ದಾಳೆ. ನಂತರ ಕಾಸ್ಟಿಂಗ್ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ. ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಸುರೇಶ್ ಪರಾರಿ ಆಗಿದ್ದಾನೆ.
ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿಯ ವಿರುದ್ಧ ಐಟಿ ಆಕ್ಟ್ ನಡಿ ದೂರು ದಾಖಲಾಗಿದೆ.