ಕೊರ್ಬಾ;+ ಬಾಯಿಗೆ ಹಲ್ಲಿ ನುಗ್ಗಿ ಮಗು ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಕೊರ್ಬಾದಲ್ಲಿ ನಡೆದಿದೆ.
ಮಲಗಿದ್ದ ವೇಳೆ ಮಗುವಿನ ಬಾಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ ಕಂಡಿದ್ದಾಳೆ. ಕಿರುಚಿದ ಆಕೆ ತಕ್ಷಣವೇ ಅದನ್ನು ಹೊರಗೆಳೆದು ಬಿಸಾಡಿದ್ದಾಳೆ. ಮಗುವನ್ನು ಎಬ್ಬಿಸಲು ಯತ್ನಿಸಿದಾಗ ಅದು ನಿಸ್ತೇಜವಾಗಿತ್ತು. ಅಕ್ಕಪಕ್ಕದವರು ಬಂದು ಕಂಡಾಗ ಮಗು ಸಾವನ್ನಪ್ಪಿದ್ದು ಗೊತ್ತಾಗಿದೆ.
ಕೋಣೆಯಲ್ಲಿ ಮಗುವೊಂದನ್ನೇ ಮಲಗಿಸಲಾಗಿತ್ತು. ತಾಯಿ ಬಂದು ನೋಡಿದಾಗಲೇ ಘಟನೆ ನಡೆದಿದ್ದು ಗೊತ್ತಾಗಿದೆ. ಹಲ್ಲಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದರು. ಮಗುವಿನ ಬಾಯಿಗೆ ಹಲ್ಲಿ ಹೇಗೆ ನುಗ್ಗಿತು ಎಂಬುದು ಯಾರಿಗೂ ತಿಳಿಯದ ಪ್ರಶ್ನೆಯಾಗಿ ಉಳಿದಿದೆ. ಹಲ್ಲಿಯ ವಿಷ ಸೇವಿಸಿ ಮಗು ಸಾವನ್ನಪ್ಪಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಜನರಲ್ಲಿನ ಅನುಮಾನವಾಗಿದೆ. ಪೋಷಕರ ಇಲ್ಲದಾಗ ಮಗುವಿಗೆ ಏನಾಯಿತು ಮತ್ತು ಹಲ್ಲಿ ಆತನ ಬಾಯಿಗೆ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ : DK Shivakumar; ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧ – DCM ಡಿಕೆಶಿ