ರಾಯಚೂರು : ಸುಮಾರು ತಿಂಗಳುಗಳಿಂದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯನ್ನು ಕಳೆದ ರಾತ್ರಿ ರೈತರು ಜಮೀನಿನಲ್ಲಿ ಸೆರೆಹಿಡಿದಿದ್ದಾರೆ.
ರಾಯಚೂರಿನ ನೆಲಹಾಳ ಗ್ರಾಮದಲ್ಲಿನ ಕೆರೆಯಲ್ಲಿ ಸುಮಾರು ತಿಂಗಳುಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮೊಸಳೆ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಹಲೋ ಭಾರೀ ರೈತರ ಜಮೀನಿನಲ್ಲಿ ಓಡಾಡುತ್ತಿದ್ದ ದೊಡ್ಡ ಗಾತ್ರದ ಮೊಸಳೆಯನ್ನ ರೈತರು ಸೆರೆಹಿಡಿದಿದ್ದಾರೆ.
ಕಳೆದ ರಾತ್ರಿ ಹೊಲಕ್ಕೆ ನೀರು ಕಟ್ಟಲು ಹೋದಂತಹ ಸಂದರ್ಭದಲ್ಲಿ ರೈತರ ಕಣ್ಣಿಗೆ ಮೊಸಳೆ ಬಿದ್ದಿದೆ. ತಕ್ಷಣ ಗ್ರಾಮದ ಹಲವು ಜನ ಸೇರಿಕೊಂಡು ಮೊಸಳೆಯನ್ನು ಹಿಡಿದಿದ್ದಾರೆ. ಮೊಸಳೆ ಸೆರೆಯಿಂದ ನಿಟ್ಟುಸಿರು ಬಿಟ್ಟಿರುವ ನೆಲಹಾಳ ಗ್ರಾಮಸ್ಥರು ಕೌತುಕದಿಂದ ಮೊಸಳೆಯನ್ನ ನೋಡಲು ದಂಡುಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮೊಸಳೆಯನ್ನ ಸೆರೆಹಿಡಿದು ಟ್ರ್ಯಾಕ್ಟರ್ ನಲ್ಲಿ ಹಾಕಲಾಗಿದ್ದು. ಮೊಸಳೆಯನ್ನ ಹಿಡಿದಿರುವ ವಿಚಾರವನ್ನು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ.