ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಸೋಗಿನಲ್ಲಿ ವಂಚಕನೊಬ್ಬ ಗುಜರಾತ್ನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಗೆ ಕರೆ ಮಾಡಿ ಹಣ ಮತ್ತು ವಜ್ರಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಅದೂ ತೇಜಸ್ವಿ ಸೂರ್ಯ ಅವರ ಅಧಿಕತ ಮೊಬೈಲ್ ಸಂಖ್ಯೆ ಬಳಸಿ! ಈ ಬಗ್ಗೆ ನಗರದ ದಕ್ಷಿಣ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜುಲೈ 1ರಂದು ತೇಜಸ್ವಿ ಸೂರ್ಯ ಅವರ ಅಧಿಕೃತ ಮೊಬೈಲ್ ಸಂಖ್ಯೆ ಬಳಸಿ ಗುಜರಾತ್ನ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೋರಟ್ ಅವರ ಮೊಬೈಲ್ಗೆ ಕರೆ ಮಾಡಿರುವ ವಂಚಕ ಹಣ ಮತ್ತು ವಜ್ರವನ್ನು ಕೊಡುಗೆಯಾಗಿ ನೀಡುವಂತೆ ಕೇಳಿದ್ದಾನೆ. ಇದರಿಂದ ಅನುಮಾನಗೊಂಡ ಪ್ರಶಾಂತ್, ಖುದ್ದು ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿದಾಗ ವಂಚಕನ ಸಂಚು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕನು ತೇಜಸ್ವಿ ಸೂರ್ಯ ಅವರ ಸೋಗಿನಲ್ಲೇ ಪ್ರಶಾಂತ್ ಕೋರಟ್ ಅವರೊಂದಿಗೆ ಸಂಭಾಷಣೆ ನಡೆಸಿದ್ದ. ವಂಚಕನು ಕೃತ್ಯಕ್ಕೆ ಬಳಸಿರುವ ಮೊಬೈಲ್ ಸಂಖ್ಯೆಯಲ್ಲೇ ತೇಜಸ್ವಿ ಸೂರ್ಯ ಅವರು ಅಧಿಕೃತ ಸಂವಹನ ನಡೆಸುತ್ತಿದ್ದರು. ಕಾರ್ಯ ಒತ್ತಡದ ಕಾರಣಕ್ಕೆ ಸಂಸದರ ಬದಲು ಅವರ ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್ ಆ ಮೊಬೈಲ್ ಸಂಖ್ಯೆಯ ಕರೆಗಳನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ, ವಂಚಕನು ಸಂಸದರು ಹಾಗೂ ಭಾನುಪ್ರಕಾಶ್ ಅವರಿಗೆ ತಿಳಿಯದಂತೆ ಆ ಮೊಬೈಲ್ ಸಂಖ್ಯೆಯನ್ನು ಕದ್ದು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯದ ಸಂಬಂಧ ಸಂಸದರ ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್ ದೂರು ಕೊಟ್ಟಿದ್ದಾರೆ. ವಂಚನೆ ಉದ್ದೇಶದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉದ್ಯಮಿಯನ್ನು ಅಪಹರಣ ಮಾಡಿ, ಬಿಡುಗಡೆಗೆ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂ ರಿನಲ್ಲಿ ನಡೆದಿದೆ. ಹಣ ನೀಡದಿದ್ದರೆ ಉದ್ಯಮಿಯನ್ನು ಕೊಲೆ ಮಾಡುವುದಾಗಿ ಅಪ ಹರಣಕಾರರು ಬೆದರಿಕೆ ಹಾಕಿದ್ದು, ಮಾಲೂರು ಠಾಣಿಯಲ್ಲಿ ಪ್ರಕರಣ ದಾಖ ಲಾಗಿದೆ. ಅಪಹರಣ ಕಾರರ ಪತ್ತೆಗೆ ಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಅಪಹರಣಕ್ಕೆ ಒಳಗಾದ ವ್ಯಕ್ತಿಯನ್ನು ಪಟ್ಟಣದ ಮಾರುತಿ ಬಡಾವಣೆಯ ನಿವಾಸಿಯಾದ ಟಿಂಬರ್ ಬಾಬು (56) ಎಂದು ಗುರುತಿ ಸಲಾಗಿದೆ.