ಅಡುಗೆ ಮನೆಯಲ್ಲಿ ಮಸಾಲೆ ಪದಾರ್ಥಗಳ ರಾಣಿಯಾಗಿ ಚಹಾದಿಂದ ಹಿಡಿದು ಅನೇಕ ಅಡುಗೆಗಳಲ್ಲಿ ಬಳಕೆಯಾಗುವ ಏಲಕ್ಕಿಯ ಪರಿಮಳಕ್ಕೆ ಮಾರು ಹೋಗದವರಾರು? ಏಲಕ್ಕಿಯ ಸುಗಂಧ ಪರಿಮಳದಂತೆ ಇದರ ಔಷಧೀಯ ಗುಣಗಳು ಅನೇಕ
ಏಲಕ್ಕಿಯ ಪ್ರಯೋಜನಗಳು:
* ಮೂಲವ್ಯಾಧಿಗೆ… ಬೆಳಿಗ್ಗೆ ಎರಡು ಬಾಳೆಹಣ್ಣು ಮಧ್ಯಕ್ಕೆ ಸೀಳಿ ಹಸಿರು ಏಲಕ್ಕಿಯ ಪುಡಿಯನ್ನು ತುಂಬಿ ಇಡಬೇಕು. ರಾತ್ರಿ ಮಲಗುವ ಮುನ್ನ ಒಂದು ಬಾಳೆ ಹಣ್ಣು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬಾಳೆ ಹಣ್ಣು ಸೇವಿಸುವುದು.
* ಬಾಯಿ ಹುಣ್ಣಿಗೆ… ದೊಡ್ಡ ಏಲಕ್ಕಿ ಪುಡಿ ಜೇನುತುಪ್ಪ ಸೇರಿಸಿ ಹಚ್ಚಬೇಕು.
* ದೊಡ್ಡ ಏಲಕ್ಕಿಯ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ವಸಡು ನೋವು ನಿವಾರಣೆಯಾಗುವುದು.
* ಅತಿಯಾದ ಬಿಕ್ಕಳಿಕೆ ಗೆ… ಎರಡು ದೊಡ್ಡ ಏಲಕ್ಕಿ ಎರಡು ಕಪ್ಪು ನೀರಿನಲ್ಲಿ ಕುದಿಸಿ ನೀರು ಕುದ್ದು ಅರ್ಧ ಆದಾಗ ಆರಿಸಿ ಕುಡಿಯಬೇಕು.
* ದೊಡ್ಡ ಏಲಕ್ಕಿ ಪುಡಿ, ಕಪ್ಪು ಉಪ್ಪು ಸೇರಿಸಿ ಸೇವಿಸಲು ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
* ದೊಡ್ಡ ಏಲಕ್ಕಿ ಕಾಳುಗಳು, ಕಲ್ಲಂಗಡಿ ಬೀಜಗಳು, ಕಲ್ಲು ಸಕ್ಕರೆ ಸೇರಿಸಿ ಪುಡಿ ಮಾಡಿ ಮೂರು ಗ್ರಾಂ ನಷ್ಟು ಚೂರ್ಣವನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ.
* ಊಟದ ನಂತರ ಹಸಿರು ಏಲಕ್ಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ, ಬಾಯಿಯ ದುರ್ಗಂಧ ದೂರವಾಗುತ್ತದೆ.
* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಏಲಕ್ಕಿ ಸೇವನೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
* ಏಲಕ್ಕಿಯಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಗುಣ ಇದೆ.
* ಬೆಲ್ಲ, ಹಸಿರು ಏಲಕ್ಕಿ ಪುಡಿ, ಸೋಂಪು ಕಾಳಿನ ಪುಡಿ, ಗಸಗಸೆ ಸೇರಿಸಿ ಮಣ್ಣಿನ ಗಡಿಗೆಯಲ್ಲಿ ತಯಾರಿಸಿದ ಪಾನಕ ಬಹಳ ತಂಪು. ಈ ಪಾನಕ ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಆಯಾಸವೂ ದೂರವಾಗುತ್ತದೆ.