ಟ್ರಾಫಿಕ್ ರೂಲ್ಸ್ ಪಾಲನೆ ಬಹಳ ಮುಖ್ಯ. ಆದರೆ, ನಮ್ಮಲ್ಲಿ ಕೆಲವರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು ಕೂಡಾ ಇದೆ. ಇದರಿಂದ ಅಪಘಾತ, ಪೊಲೀಸರಿಂದ ದಂಡದ ಶಿಕ್ಷೆ ಸೇರಿದಂತೆ ನಾನಾ ಕಷ್ಟಗಳೂ ಎದುರಾಗುವುದು ಕೂಡಾ ಹೊಸದೇನೂ ಅಲ್ಲ. ಆದರೆ, ಇಲ್ಲೊಂದು ಕಡೆ ಜಿಂಕೆ ಸಂಚಾರ ನಿಯಮವನ್ನು ಪಾಲಿಸಿದೆ…! ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: Viral Video : ದಾಳಿ ಮಾಡಲು ಚಿರತೆಯನ್ನು ಬೆನ್ನಟ್ಟಿದ ಹುಲಿ! : ಬಲು ರೋಚಕ ದೃಶ್ಯವಿದು
Video Player
00:00
00:18
ಪ್ರಾಣಿಗಳ ಜೀವನಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಕುತೂಹಲಕಾರಿ ಹಾಗೂ ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ ನಮಗೆ ಕಾಣಸಿಗುತ್ತವೆ. ಸಹಜವಾಗಿಯೇ ಈ ದೃಶ್ಯಗಳು ನಮ್ಮನ್ನು ಸೆಳೆಯುತ್ತವೆ. ಇದು ಕೂಡಾ ಅದೇ ಸಾಲಿಗೆ ಸೇರುವ ದೃಶ್ಯ. ಇಲ್ಲೊಂದು ಜಿಂಕೆ ವಾಹನ ಸಂಚಾರ ನಿಲ್ಲುವ ತನಕ ಶಾಂತವಾಗಿ ಕಾದು ಬಳಿಕ ರಸ್ತೆ ದಾಟಿದೆ. ಅಡ್ಡಾದಿಡ್ಡಿ ಓಡಿ ತಾನೂ ಸಂಕಷ್ಟಕ್ಕೆ ಗುರಿಯಾಗದೆ, ವಾಹನ ಸವಾರರನ್ನೂ ಸಂಕಟಕ್ಕೆ ದೂಡದೆ ಈ ಜಿಂಕೆ ತೋರಿದ ಶಾಂತತೆ ಎಲ್ಲರಿಗೂ ಇಷ್ಟವಾಗಿದೆ.