ಬೆಂಗಳೂರು:– ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಹಿಸುತ್ತಿದ್ದೀರಾ!?. ಹಾಗಿದ್ರೆ ಈ ಸುದ್ದಿ ನೀವು ಮಿಸ್ ಮಾಡ್ದೆ ನೋಡಲೇಬೇಕು. ಹೌದು, ವೀಕ್ಷಕರೇ ಸಿಲಿಕಾನ್ ಸಿಟಿಯಲ್ಲೊಂದು ಪೈಶಾಚಿಕ ಕೃತ್ಯ ಜರುಗಿದೆ. ಶಾಲೆಗೆ ಸೇರಿದ ಎಂಟೆ ದಿನಕ್ಕೆ ಶಿಕ್ಷಕಿ ಒಬ್ಬರು ನರಕ ತೋರಿಸಿದ್ದಾರೆ. ಶಾಲೆಗೆ ಕಳುಹಿಸೋ ಪ್ರತಿಯೊಬ್ಬ ಪೋಷಕರು ಈ ಸುದ್ದಿ ಕೊನೆಯವರೆಗೂ ನೋಡಿ.
ಎಸ್, ಶಾಲೆಗಳಲ್ಲಿ ನಿಮ್ಮ ಮಕ್ಕಳು ಎಷ್ಟು ಸೇಫ್ ಅಂತಂದ್ರೆ ಈ ಸ್ಟೊರಿ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ.ಶಿಕ್ಷಣ ನೀಡಬೇಕಾದ ಗುರುಗಳೇ ಈ ರೀತಿ ಮಾಡಿದ್ರೆ ಹೇಗೆ..? ಎಂಬ ಪ್ರಶ್ನೆ ಮೂಡತ್ತೆ. ವೆಂಕಟೇಶ್ವರ ಪುರದ
ಅನ್ವರ್ ಲೇಔಟ್ ಬ್ಲೂಮ್ ಪಬ್ಲಿಕ್ ಸ್ಕೂಲ್ ನಲ್ಲಿ ಘಟನೆ ಜರುಗಿದೆ.
ಘಟನೆ ವಿವರ:
ಹೌದು ನಾಲ್ಕು ವರ್ಷದ ಪುಟ್ಟ ಕಂದಮ್ಮನಿಗೆ ಶಿಕ್ಷಕಿ ಒಬ್ಬಳು ಖಾಸಗಿ ಅಂಗಗಳಿಗೆ ಬೆರಳು ಹಾಕಿ ಹಲ್ಲೆ ಮಾಡಿ, ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ರಕ್ತ ಬರುವಂತೆ ಬೆರಳು ಹಾಕಿ ಹಲ್ಲೆ ಮಾಡಿದ್ದಾರೆ.
ಗುಡ್ ಅಂಡ್ ಬ್ಯಾಡ್ ಟಚ್ ಬಗ್ಗೆ ಹೇಳಿ ಕೋಡಬೇಕಾದವರೆ ಹೀಗೆ ಮಾಡಿದ್ರೆ ..?ಇದು ಖಾಸಗಿ ಶಾಲಾ ಶಿಕ್ಷಕಿಯ ರಾಕ್ಷಸಿ ಪ್ರವೃತಿ ಎನ್ನಲಾಗಿದೆ. ಹೊಟ್ಟೆನೋವು ಎಂದು ಕಂದಮ್ಮ ಯಾಥನೆಪಡುತ್ತಿದೆ. ಗಾಬರಿಯಾದ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ವಾಣಿವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋದ ಪೋಷಕರಿಗೆ ಶಾಕ್ ಆಗಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.
ದೇಹದ ಖಾಸಗಿ ಅಂಗಗಳಲ್ಲಿ ಗಾಯವಾಗಿ ರಕ್ತಸ್ರಾವ ವಾಗಿದೆ. ಬೇಡ – ಬೇಡ ಎಂದರು ಬೆರಳು ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ರಂತೆ ಟೀಚರ್. ನೋವಿನಿಂದ ಆ ಪುಟ್ಟ ಕಂದಮ್ಮ ನರಕಯಾಥನೆ ಪಡುತ್ತಿದೆ ನಡೆಯಲು ಆಗದೆ ಕಷ್ಟ ಪಡುತ್ತಿದೆ. ಟೀಚರ್ ಮಾಡಿದ ಕೃತ್ಯದ ಬಗ್ಗೆ ತೊದಲು ಮಗಪ ಮಾತಿನಿಂದಲೇ ಹೇಳಿದೆ. ಈ ಹಿನ್ನೆಲೆ ಕೆಜೆ ಹಳ್ಳಿ ಪೋಲಿಸ್ ಠಾಣೆಯಲ್ಲಿ ಪೊಲೀಸರು ದೂರು ನೀಡಿದೆ.
ಕೆಜೆ ಹಳ್ಳಿಯ ವೆಂಕಟೇಶ್ವರ ಪುರ ಬಳಿಯ ಅನ್ವರ್ ಲೇಔಟ್ ಬ್ಲೂಮ್ ಪಬ್ಲಿಕ್ ಸ್ಕೂಲ್ ನಲ್ಲಿ ಘಟನೆ ಜರುಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.