ನವದೆಹಲಿ ;- ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದ ಮೇಲೆ ಅನಧಿಕೃತವಾಗಿ ಡ್ರೋನ್ ಹಾರಿದ್ದು, ತನಿಖೆಗೆ ಆದೇಶಿಸಲಾಗಿದೆ.
ಇಂದು ಬೆಳಗ್ಗೆ ನವದೆಹಲಿಯಲ್ಲಿ ಇಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಹಾರಾಡಿದೆ ಎನ್ನಲಾದ ಡ್ರೋನ್ ಒಂದನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ.
ಪ್ರಧಾನಿಯನ್ನು ರಕ್ಷಿಸುವ ವಿಶೇಷ ರಕ್ಷಣಾ ಗುಂಪಿನ ಅಧಿಕಾರಿಗಳು ಡ್ರೋನ್ ಹಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ರಕ್ಷಣಾ ಪಡೆಗಳ ಎಚ್ಚರಿಕೆಯ ನಂತರ, ದೆಹಲಿ ಪೊಲೀಸರು ಡ್ರೋನ್ ಅನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ ಇನ್ನೂ ಡ್ರೋನ್ ಪತ್ತೆಯಾಗಿಲ್ಲ.
ಪಿಎಂ ಮೋದಿ ಅವರ ನಿವಾಸವು ರೆಡ್ ಝೋನ್ ಅಥವಾ ನೋ ಡ್ರೋನ್ ಫ್ಲೈ ಝೋನ್ ಅಡಿಯಲ್ಲಿ ಬರುತ್ತದೆ.