ದಕ್ಷಿಣ ಕೊರಿಯಾದ ಗಾಯಕಿ ಪಾರ್ಕ್ ಬೋ ರಾಮ್ ತನ್ನ 30ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೆ-ಪಾಪ್ ಗಾಯಕಿಯ ನಿಧನ ಸುದ್ದಿಯನ್ನು ಕೇಳಿ ದಕ್ಷಿಣ ಕೊರಿಯಾದ ಮ್ಯೂಸಿಕ್ ಇಂಡಸ್ಟ್ರಿಗೆ ಶಾಕ್ ಆಗಿದೆ.
ಪಾರ್ಕ್ ಬೋ ರಾಮ್ ಸಾವಿನ ಸುದ್ದಿಯನ್ನು ಆಕೆಯ ಏಜೆನ್ಸಿ ಖಚಿತಪಡಿಸಿದೆ. ಏಪ್ರಿಲ್ 11 ರಂದು ತಡರಾತ್ರಿ ಪಾರ್ಕ್ ಬೋ ರಾಮ್ ಹಠಾತ್ ನಿಧನರಾದರೆಂದು ಹೇಳಲು ನಮಗೆ ಅತೀವ ದುಃಖವಾಗುತ್ತಿದೆ. ಪಾರ್ಕ್ ಬೋ ರಾಮ್ ಅವರನ್ನು ಬೆಂಬಲಿಸುವ ಎಲ್ಲಾ ಅಭಿಮಾನಿಗಳಿಗೆ ನಾವು ಈ ಹಠಾತ್ ಸುದ್ದಿಯನ್ನು ಹೇಳಬೇಕಾಗಿರುವುದು ಇನ್ನಷ್ಟು ದುಃಖಕರವಾಗಿದೆ ಎಂದು ಕ್ಸಾನಾಡು ಎಂಟರ್ಟೈನ್ಮೆಂಟ್ ಹೇಳಿದೆ.
ಪಾರ್ಕ್ ಬೋ ರಾಮ್ ಈ ವರ್ಷ ಸಂಗೀತ ಕ್ಷೇತ್ರದಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಲಿದ್ದರು. ಈ ಸಂದರ್ಭದಲ್ಲಿ ಹೊಸ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು ಈ ಮಧ್ಯೆ ಪಾರ್ಕ್ ನಿಧ ಅಘಾತ ಉಂಟುಮಾಡಿದೆ.
ಪಾರ್ಕ್ ಬೋ ರಾಮ್ ಅವರು ಸಾಯುವ ಕೆಲ ಗಂಟೆಗಳ ಮೊದಲು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿದ್ದರು. ಈ ವೇಳೆ ಅವರು ಮದ್ಯಪಾನ ಮಾಡುತ್ತಿದ್ದರು. ಗಾಯಕಿ ರಾತ್ರಿ 9:55 ಕ್ಕೆ ವಾಶ್ರೂಮ್ಗೆ ಹೋಗುವುದಾಗಿ ಹೇಳಿ ಹೋದವರು ವಾಪಾಸ್ ಬಾರದೇ ಇರುವುದನ್ನು ಕಂಡಾಗ ಅವರ ಸ್ನೇಹಿತರು ವಾಶ್ ರೂಮ್ ನತ್ತ ಹೋಗಿದ್ದಾರೆ. ಆದರೆ ಈ ವೇಳೆ ಅವರು ಸಿಂಕ್ ಬಳಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ತಕ್ಷಣ ಅವರನ್ನು ಸಿಪಿಆರ್ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರಾತ್ರಿ 11:17 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.