ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವೇಳೆ ಅಭಿಮಾನಿಯೊಬ್ಬರು ಹೂವಿನ ಜೊತೆಗೆ ಮೊಬೈಲ್ (Mobile) ಎಸೆದ ಘಟನೆ ಬೆಂಗಳೂರು (Bengaluru) ಜೆ.ಪಿ. ನಗರದಲ್ಲಿ ನಡೆದಿದೆ.
ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆದಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿದರು. ರೇಷ್ಮೆಯ ಕೇಸರಿ ಮೈಸೂರು ಪೇಟದಲ್ಲಿ ಕಂಗೊಳಿಸಿದರು. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದ್ದರು.
ರೋಡ್ ಶೋ ಜೆ.ಪಿ ನಗರದ ಬಳಿ ಬಂದಾಗ ಅಹಿತಕರ ಘಟನೆಯೊಂದು ನಡೆದಿದೆ. ಮೊದಿಗೆ ಹೂ ಎಸೆಯುವಾಗ ಮೊಬೈಲ್ ಬಿದ್ದಿದ್ದು, ಆದರೆ ಯಾವುದೇ ಅನಾಹುತಗಳಾಗಿಲ್ಲ. ಬದಲಿಗೆ ಮೊಬೈಲ್ ರಸ್ತೆ ಮೇಲೆ ಬಿದ್ದಿದೆ.
ಈ ರೀತಿ ಅಹಿರತಕರ ಘಟನೆ ನಡೆದಿದ್ದು, ಇದೇ ಮೊದಲಲ್ಲ. ಈ ಮೊದಲು ಕೇರಳದ ಕೊಚ್ಚಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ಶೋ ವೇಳೆ ಮೊಬೈಲ್ ಎಸೆಯಲಾಗಿತ್ತು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಮೋದಿಗೆ ತಗಲದಂತೆ ನೋಡಿಕೊಂಡಿದ್ದಾರೆ. ಈ ಬಳಿಕ ತನಿಖೆ ನಡೆಸಿದ್ದಾಗ ಪ್ರಧಾನಿಯವರ ಮೇಲೆ ಹೂವಿನ ದಳಗಳನ್ನು ಸುರಿಸುವುದಕ್ಕೆ ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರ ಕೈಯಿಂದ ಫೋನ್ ಕೈತಪ್ಪಿ ಹೋಗಿತ್ತು ಎಂದು ಮೂಲಗಳು ತಿಳಿಸಿತ್ತು.
ಕಳೆದ ವಾರ ಮೈಸೂರಿನಲ್ಲಿ ನಡೆದಿದ್ದ ರೋಡ್ ಶೋ ವೇಳೆ ಮೋದಿಯತ್ತ ಹೂವಿನ ದಳಗಳೊಂದಿಗೆ ಮೊಬೈಲ್ ಫೋನ್ ಅನ್ನು ಎಸೆದಿದ್ದರು. ಅದನ್ನು ಸ್ವತಃ ಮೋದಿ ಹಾಗೂ ಎಸ್ಪಿಜಿಯವರು ಗಮನಿಸಿದ್ದರು. ಅಷ್ಟೇ ಅಲ್ಲದೇ ಮೋದಿ ಅವರು ರೋಡ್ ಶೋ ವೇಳೆಯೇ ಮೊಬೈಲ್ ಅನ್ನು ಹಿಂದಿರುಗಿಸುವಂತೆ ಸನ್ನೆಯನ್ನು ಮಾಡಿದ್ದರು. ನಂತರ ಮೊಬೈಲ್ ಫೋನ್ ಅನ್ನು ವಾಪಸ್ ನೀಡಲಾಗಿತ್ತು.