ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆಗೆ ಮುತ್ತು ಕೊಡಲು ಬಂದ ಘಟನೆ ನಡೆದಿದೆ. ಇದರಿಂದ ಬೇಸರಗೊಂಡ ನಟಿ ಆತನನ್ನು ತಳ್ಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ನಟಿ ಪೂನಂ ಪಾಂಡೆ ಮುಂಬೈನ ಬೀದಿಯೊಂದರಲ್ಲಿ ಕೆಂಪು ಬಣ್ಣದ ಗೌನ್ ಹಾಗೂ ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿ ಬರುತ್ತಿದ್ದರು. ಈ ವೇಳೆ ಆಕೆಯ ಹತ್ತಿರ ಬಂದ ವ್ಯಕ್ತಿಯೋರ್ವ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಪೂನಂ ಸೆಲ್ಪಿಗೆ ಫೋಸ್ ಕೊಡುತ್ತಿದ್ದಂತೆ ಆಕೆಗೆ ಮುತ್ತು ಕೊಡಲು ಹೋಗಿದ್ದಾರೆ, ಇದರಿಂದ ಗಾಬರಿಗೊಂಡ ನಟಿ ತಕ್ಷಣವೇ ಆತನನ್ನು ತಳ್ಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪೂನಂ ಪಾಂಡೆಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲಾ ಪೂನಂ ಪ್ರಚಾರಕ್ಕೆ ಮಾಡುತ್ತಿರುವ ಟ್ರಿಕ್ಸ್ ಎಂದು ಹಲವರು ಹೇಳಿದ್ದಾರೆ. ಈ ಹಿಂದೆ ತಾವು ಮೃತಪಟ್ಟಿರುವುದಾಗಿ ಸುದ್ದಿ ಮಾಡಿ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದರು ನಟಿ ಪೂನಂ ಪಾಂಡೆ.
