ಕೇರಳ: ವಯನಾಡ್ನಲ್ಲಿ ಸರಣಿ ಭೂಕುಸಿತಕ್ಕೆ ಅಪಾರ ಪ್ರಮಾಣದ ಜೀವ ಹಾನಿಯಾಗಿದೆ. ಮುಂಡಕ್ಕೈನಲ್ಲಿ ರಕ್ಷಣಾಕಾರ್ಯ ಮುಂದುವರೆದಿದ್ದು, ಮುಂಡಕ್ಕೈ ಮತ್ತು ಚೂರಲ್ಮಾಲಕ್ಕೆ ಭಾರತೀಯ ಸೇನೆಯಿಂದ ತಾತ್ಕಾಲಿಕ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ.
ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್, ಬೆಂಗಳೂರಿನಿಂದ ಈ ಸೇತುವೆ ನಿರ್ಮಾಣವಾಗಿತ್ತು. ಭಾರತೀಯ ಸೇನೆ ಕರ್ನಾಟಕ-ಕೇರಳ ಉಪ ವಿಭಾಗದ 200ಕ್ಕೂ ಹೆಚ್ಚು ಸೈನಿಕರು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿದ್ದರು. ಸೀತಾ ಅಶೋಕ್ ಶೆಲ್ಕೆ, ಬ್ರಿಡ್ಜ್ ಆಪರೇಷನ್ನ ನೇತೃತ್ವ ವಹಿಸಿಕೊಂಡಿದ್ದರು.
ಬುದುವಾರ ರಾತ್ರಿ 9:30 ಕ್ಕೆ ಆರಂಭವಾಗಿ ಗುರುವಾರ ಸಂಜೆ 5:30ಕ್ಕೆ ಬ್ರಿಡ್ಜ್ ಕಾಮಗಾರಿ ಮುಗಿದಿತ್ತು. ಕೆಲವೇ ಗಂಟೆಗಳಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ, ಮುಂಡಕ್ಕೈ ಚೂರಾಲ್ಮಾಲ ಗ್ರಾಮಸ್ಥರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಯ್ತು. ಇನ್ನೂ ದೆಹಲಿ, ಬೆಂಗಳೂರಿನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ 17 ಟ್ರಕ್ಗಳ ಮೂಲಕ ವಯನಾಡ್ಗೆ ಸೇತುವೆ ನಿರ್ಮಾಣಕ್ಕೆ ಸಾಮಗ್ರಿಗಳನ್ನ ತರಲಾಗಿತ್ತು.