ಸಾಧನೆ ಮಾಡಬೇಕು ಎಂಬ ಛಲ ಇದ್ದವರಿಗೆ ವಯಸ್ಸು ಯಾವತ್ತು ಅಡ್ಡಿಯಲ್ಲ ಎಂಬಕ್ಕೆ ಬ್ರಿಟನ್ನ ಈ ಮೆನೆಟ್ ಬೈಲಿ ಅನ್ನೋ ಈ 102 ವರ್ಷದ ವೃದ್ಧೆಯೇ ಸಾಕ್ಷಿ.
ಬ್ರಿಟನ್ನ ಅತ್ಯಂತ ಹಿರಿಯ ಸ್ಕೈ ಡೈವರ್ ಅನ್ನೋ ಪಟ್ಟಿಯಲ್ಲಿ ಮೊದಲ ಸ್ಥಾನ ಮೆನೆಟ್ ಬೈಲಿ ಪಡೆದಿದ್ದಾರೆ. ತಮ್ಮ 102ನೇ ವಯಸ್ಸಿನಲ್ಲಿ 2100 ಮೀಟರ್ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಈ ವೃದ್ಧೆ ಹೊಸ ಇತಿಹಾಸ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಮೆನೆಟ್ ಬೈಲಿ ತಮ್ಮ 100ನೇ ವರ್ಷದ ಹುಟ್ಟಿದ ಹಬ್ಬದ ಪ್ರಯುಕ್ತವಾಗಿ ಸಿಲ್ವರ್ಸ್ಟೋನ್ ಮೋಟರ್ ರೇಸಿಂಗ್ ಸರ್ಕ್ಯೂಟ್ನ ಸ್ಪರ್ಧೆಯಲ್ಲಿ ಗಂಟೆಗೆ 210 ಕಿಲೋಮೀಟರ್ ವೇಗದಲ್ಲಿ ಫೆರಾರಿ ಕಾರ್ ಓಡಿಸಿ ದಾಖಲೆ ಬರೆದಿದ್ದರು.
ಈಗ ಬೆಕ್ಲೆಸ್ ಏರ್ಫೀಲ್ಡ್ ಏರ್ಪಡಿಸಿದ್ದ ಸ್ಕೈ ಡೈವ್ನಲ್ಲಿ ಸುಮಾರು 2100 ಮೀಟರ್ ಎತ್ತರದ ಸ್ಕೈ ಡೈವಿಂಗ್ ಮಾಡುವ ಮೂಲಕ ಸಾಧನೆಗೆ ಜೀವನೋತ್ಸಾಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಿಲ್ಲ. ಸದಾ ಚಿಲುಮೆಯಂತಿರಲು ಬದುಕನ್ನ ಹೊಸ ಹೊಸ ಸಾಧನೆಗೆ ಒಡ್ಡಿಸಿಕೊಳ್ಳಬೇಕು ಎಂದು ಮೆನೆಟ್ ಹೇಳಿದ್ದಾರೆ.
ಬ್ರಿಟನ್ನ ಮಾಧ್ಯಮಗಳ ಮುಂದೆ ಮಾತನಾಡಿರುವ 102ರ ಹರೆಯದ ಬೈಲಿ. 80, 90 ವಯಸ್ಸಿಗೆ ಬಂದವರು ಬದುಕೇ ಮುಗಿದು ಹೋಯ್ತು ಎಂದು ಕುಳಿತವರಿಗೆ ಸಂದೇಶ ನೀಡಲು ನಾನು ಈ ಸಾಹಸಕ್ಕೆ ಕೈ ಹಾಕಿದ್ದೆ. ಸ್ಕೈ ಡೈವ್ ಮಾಡುವಾಗ ಆರಂಭದಲ್ಲಿ ಭಯವಾಗಿದ್ದು ನಿಜ, ಆದ್ರೆ ನಾನು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. ಇದು ನನಗೆ ಸಹಾಯವಾಯ್ತು. ವಯಸ್ಸಾಯ್ತು ಎಂದು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಯಾವುವೇ ವಯಸ್ಸಲ್ಲೂ ನಾವು ಚಟುವಟಿಕೆಯಿಂದ ಇರಬಹುದು ಅನ್ನೋದನ್ನ ಹೇಳಲು ನಾನು ಈ ಸಾದನೆಗೆ ಕೈ ಹಾಕಿದೆ ಎಂದು ಹೇಳಿದ್ದಾರೆ.