ಜೈಪುರ: ವಧು ಒಬ್ಬಳು ಬರೋಬ್ಬರಿ 3 ಕೋಟಿ ಹಣವನ್ನು ಉಡುಗೊರೆಯಾಗಿ ಪಡೆದ ಅಚ್ಚರಿಯ ಘಟನೆ ರಾಜಸ್ಥಾನ (Rajasthan) ದಲ್ಲಿ ನಡೆದಿದೆ. ರಾಜಸ್ಥಾನದ ನಾಗೌರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ವಯಸ್ಸಾದವರು ಹಣವನ್ನು ತಟ್ಟೆಯಲ್ಲಿ ಹಾಕಿ ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗಿದೆ.
ಘೇವರಿ ದೇವಿ ಮತ್ತು ಭನ್ವರ್ ಲಾಲ್ ಪೊಟಾಲಿಯಾ ಅವರ ಮಗಳ ಅನುಷ್ಕಾ ವಿವಾಹವಾದರು. ಈ ಸಂದರ್ಭದಲ್ಲಿ ಬುರ್ಡಿ ಗ್ರಾಮದ ನಿವಾಸಿ ವಧುವಿನ ತಾಯಿಯ ಅಜ್ಜ ಭನ್ವರ್ ಲಾಲ್ ಗರ್ವಾ ಮತ್ತು ಅವರ ಮೂವರು ಮಕ್ಕಳಾದ ಹರೇಂದ್ರ, ರಾಮೇಶ್ವರ ಮತ್ತು ರಾಜೇಂದ್ರ ಅವರ ಉಡುಗೊರೆಗಳನ್ನು ನೀಡಿದರು.
ಅಜ್ಜ ಮತ್ತು ಚಿಕ್ಕಪ್ಪಂದಿರು 80 ಲಕ್ಷ ರೂ. ನಗದು, ಆಭರಣ, ಪ್ಲಾಟ್ ಪೇಪರ್ಸ್, ಟ್ರ್ಯಾಕ್ಟರ್ನೊಂದಿಗೆ ಸಾಂಪ್ರದಾಯಿಕ ಆಚರಣೆಯ ಸಲುವಾಗಿ ತೆರಳಿದರು. ಇವರನ್ನು ನೆರೆದಿದ್ದ ಜನ ನೋದಿ ಒಂದು ಬಾರಿ ದಂಗಾಗಿ ಹೋದರು. ಕುಟುಂಬದಲ್ಲಿ ಘೇವರಿ ಒಬ್ಬಳೇ ಮಗಳಾಗಿದ್ದು, ಆಕೆಯ ಅದೃಷ್ಟದಿಂದ ವರ ಮೂವರು ಪುತ್ರರು ಇಷ್ಟೊಂದು ಸಂಪತ್ತನ್ನು ಪಡೆದಿದ್ದಾರೆ ಎಂದು ಭನ್ವರ್ ಲಾಲ್ ಹೇಳಿದ್ದಾರೆ.