ತಮಿಳುನಾಡು:- ಇಲ್ಲಿನ ಹೊಸೂರು ಬಳಿ 70 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಇಂದು ಬೆಳಗ್ಗೆ ಕೆಲಮಂಗಲಂ ಮತ್ತು ರಾಯಕೋಟೆ ರಸ್ತೆಯನ್ನು ಗಜಪಡೆ ಕ್ರಾಸ್ ಮಾಡಿದೆ.
ರಾಯಕೋಟೆ ಸಮೀಪದ ಹನುಮಂತಪುರಂ ಬಳಿ ಗಜಪಡೆ ಬೀಡುಬಿಟ್ಟಿದೆ. ಶಾನಮಾವು ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದು, ಅನಗತ್ಯವಾಗಿ ಹೊಲಗದ್ದೆಗಳಿಗೆ ಓಡಾಟ ಜೊತೆಗೆ ಅರಣ್ಯ ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗಿದೆ
ಕಳೆದ ತಿಂಗಳು ನೂರಕ್ಕೂ ಹೆಚ್ಚು ಕಾಡಾನೆಗಳು ಕರ್ನಾಟಕದ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ತೊರೆದಿದ್ದವು. ಜವಳಗಿರಿ ಅರಣ್ಯದ ಮೂಲಕ 70 ಕಾಡಾನೆಗಳು ತಮಿಳುನಾಡಿನ ಹೊಸೂರು ಅರಣ್ಯ ಪ್ರದೇಶ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ರೈತರ ಹೊಲಗದ್ದೆಗಳಿಗೆ ಲಗ್ಗೆಯಿಡದಂತೆ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿದ್ದರು. ಇಂದು ಸಂಜೆ ರಾಯಕೋಟೆ ಅಥವಾ ಡೆಂಕಣಿಕೋಟೆ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆ ಸಿದ್ದತೆ ನಡೆಸಿದೆ.