ಪಾಕಿಸ್ತಾನ: ತನ್ನ ಫೇಸ್ಬುಕ್ (Facebook) ಸ್ನೇಹಿತ ನಸ್ರುಲ್ಲಾನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ(Pakistan) ತೆರಳಿದ ಭಾರತೀಯ ಮಹಿಳೆ ಅಂಜು(Anju). ಈಕೆ ತನ್ನ ಪತಿ ಅರವಿಂದ್ ಕುಮಾರ್ ಅವರನ್ನು ಅಲ್ವಾರ್ನಲ್ಲಿ ಬಿಟ್ಟು ಪಾಕಿಸ್ತಾನಿಯನ್ನು ಮದುವೆಯಾಗಿದ್ದಾಳೆ. ಹೀಗೆ ಪಾಕಿಸ್ತಾನಕ್ಕೆ ಬಂದು ಮತಾಂತರಗೊಂಡ ಈಕೆಗೆ, ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50,000 ಪಿಕೆಆರ್ ಚೆಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಉಡುಗೊರೆಗಳು ಈಗ ಫಾತಿಮಾ ಆಗಿ ಮತಾಂತರಗೊಂಡಿರುವ ಅಂಜುಗೆ ಪಾಕಿಸ್ತಾನ ತಮ್ಮದೇ ಮನೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವಿಡಿಯೊ ವೈರಲ್ ಆಗಿದೆ.
ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸಲು ಅಭಿನಂದನೆ ಸಲ್ಲಿಸಲು ಕೊಡುತ್ತಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.ಇನ್ನೊಂದು ವಿಷಯವೆಂದರೆ ಯಾರಾದರೂ ಇಲ್ಲಿಗೆ ಬಂದಾಗ ಅವರಿಗೆ ಎದುರಾಗುವ ಮುಖ್ಯ ಸಮಸ್ಯೆ ವಸತಿ.
ನಮ್ಮಲ್ಲಿ ಪ್ರಾಜೆಕ್ಟ್ ಚಾಲನೆಯಲ್ಲಿರುವ ಕಾರಣ, ನಾವು ಅವರಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು ಎಂದು ನಾವು ಭಾವಿಸಿದ್ದೇವೆ. ನಮ್ಮ ಆಡಳಿತ ಮಂಡಳಿ ಅದನ್ನು ಅನುಮೋದಿಸಿದೆ. ನಾವು ಅವಳ ಹೆಸರಿಗೆ ಜಮೀನು ನೀಡಿದ್ದೇವೆ. ಇಸ್ಲಾಂಗೆ ಮತಾಂತರಗೊಂಡ ನಂತರ ಅವಳು ಯಾವುದೇ ತೊಂದರೆ ಎದುರಿಸಲಿಲ್ಲ ಎಂದು ಅವಳು ಭಾವಿಸದಿರಲು ಹೀಗೆ ಮಾಡಿದ್ದು. ಉಳಿದವು ಎಲ್ಲಾ ಸಣ್ಣ ಉಡುಗೊರೆಗಳಾಗಿವೆ. ಇದರಿಂದ ಅವಳು ಇದನ್ನು ತನ್ನ ಮನೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದರು.