ವಾಷಿಂಗ್ಟನ್:- ಆಶ್ರಯ ಕೊಟ್ಟ ಭಾರತೀಯ ವಿದ್ಯಾರ್ಥಿಯನ್ನೇ ಹೊಡೆದು ಯುಎಸ್ ನಿರಾಶ್ರಿತ ವ್ಯಕ್ತಿ ಕೊಂದಿದ್ದಾನೆ.
ಸೈನಿ (25) ಮೃತ ಭಾರತೀಯ ವಿದ್ಯಾರ್ಥಿ. ತಾನು ಮನೆಗೆ ಹೋಗುವ ಹಿನ್ನೆಲೆ ಬೇರೆ ಕಡೆ ಹೋಗು ಎಂದಿದ್ದಕ್ಕೆ ನಿರಾಶ್ರಿತ ವ್ಯಕ್ತಿ ಅಮೆರಿಕದ ಜಾರ್ಜಿಯಾದಲ್ಲಿನ ಕನ್ವೀನಿಯನ್ಸ್ ಸ್ಟೋರ್ನಲ್ಲಿ ಸುತ್ತಿಗೆಯಿಂದ ಹೊಡೆದು ದಾರುಣವಾಗಿ ಕೊಲೆ ಮಾಡಿದ್ದಾನೆ.
ವಿವೇಕ್ ಯುಎಸ್ನಲ್ಲಿ ವಿದ್ಯಾರ್ಥಿಯಾಗಿದ್ದು, ಜಾರ್ಜಿಯಾದ ಕನ್ವೀನಿಯನ್ಸ್ ಸ್ಟೋರ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಈ ವೇಳೆ ಸೈನಿ ಸೇರಿದಂತೆ ಫುಡ್ ಮಾರ್ಟ್ನಲ್ಲಿನ ಉದ್ಯೋಗಿಗಳು ಜೂಲಿಯನ್ ಫಾಕ್ನರ್ ಎಂಬ ನಿರಾಶ್ರಿತ ವ್ಯಕ್ತಿಗೆ ಆಹಾರ ಮತ್ತು ಅಶ್ರಯ ನೀಡುತ್ತಿದ್ದರು.
ಆರೋಪಿ ಮೊದಲು ಚಿಪ್ಸ್ ಮತ್ತು ಕೋಕ್ನ್ನು ಕೇಳಿದ್ದು, ಅದನ್ನು ನೀಡಿದ್ದಾರೆ. ನಂತರ ಹೊದಿಕೆ ಕೇಳಿದ್ದಾನೆ. ಅವರ ಬಳಿ ಹೊದಿಕೆ ಇಲ್ಲ ಎಂದು ಹೇಳಿ ಜಾಕೆಟ್ ನೀಡಿದ್ದರು. ಹಾಗೆಯೇ ಸಿಗರೇಟ್, ನೀರು ಮತ್ತು ಎಲ್ಲವನ್ನು ಕೇಳುತ್ತಾ ಒಳಗೆ, ಹೊರಗೆ ನಡೆಯುತ್ತಿದ್ದನು. ನಿತ್ಯವೂ ಅಲ್ಲಿಯೇ ಕುಳಿತಿರುತ್ತಿದ್ದನು. ಚಳಿ ಇದ್ದ ಪರಿಣಾಮ ಆರೋಪಿಯನ್ನು ಹೊರಗೆ ಹೋಗುವಂತೆ ಹೇಳಿರಲಿಲ್ಲ ಎನ್ನಲಾಗಿದೆ
ರಾತ್ರಿ ಸೈನಿ ಮನೆಗೆ ಹೋಗುವ ಹಿನ್ನೆಲೆಯಲ್ಲಿ ಆರೋಪಿಗೆ ಅಲ್ಲಿಂದ ಹೋಗುವಂತೆ ಹೇಳಿದ್ದಾನೆ. ಅವನ್ನು ಹೋಗದೆ ಇದಲ್ಲಿ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಕೋಪಗೊಂಡ ಆರೋಪಿ, ಸೈನಿ ಅವರಿಗೆ ಸುತ್ತಿಗೆಯಿಂದ ಸುಮಾರು 5ಂ ಬಾರಿ ತಲೆ ಹಾಗೂ ಮುಖದ ಮೇಲೆ ಹೊಡೆದು ಹಲ್ಲೆ ಮಾಡಿದ್ದಾನೆ