ಹುಲಿಗಳಕಾದಾಟದಲ್ಲಿ ಭಾರೀ ಗಾತ್ರದ ಹುಲಿಯೊಂದು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದ ಬಳಿ ಹುಲಿ ಶವ ಪತ್ತೆಯಾಗಿದೆ.
ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಸಂಪಿಗೆ ಮೀಸಲು ಅರಣ್ಯದ ಬರಳ್ಳ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ಸಂದರ್ಭದಲ್ಲಿ ,5 ರಿಂದ 6 ವರ್ಷ ಅಂದಾಜಿನ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದ್ದು ಹುಲಿಯ ಭುಜದಲ್ಲಿ ಆಳ ಗಾಯವಾಗಿದೆ. ಸರಹದ್ದಿನ ಕಾದಾಟದಲ್ಲಿ ಹುಲಿ ತೀವ್ರವಾಗಿ ಗಾಯಗೊಂಡು ಹುಲಿ ಮೃತಪಟ್ಟಿರುವುದು ಧೃಡವಾಗಿದೆ.
ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ಎನ್ಓಪಿಯು ಅನುಗುಣವಾಗಿ
ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಮರಣೋತ್ತರ ಪರೀಕ್ಷೆ ನಡೆಸಿದರು.
ಈ ವೇಳೆ ಬಿಆರ್ಟಿ ಡಿಸಿಎಫ್ ದೀಪಾ ಕಂಟ್ರಾಕ್ಟರ್, ವನ್ಯ ಜೀವಿ ಪರಿಪಾಲಕರಾದ ಜಿ. ಮಲ್ಲೇಶಪ್ಪ, ಕೃತಿಕ ಆಲನಹಳ್ಳಿ, ಪಶುವೈ ದ್ಯರಾದಡಾ. ಮಿರ್ಜಾವಾಸಿಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಗೋಪಾಲ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ವಾಸು ಸಿಬ್ಬಂಧಿಗಳು ಉಪಸ್ಥಿತರಿದ್ರು.