ಲೋಕಸಭಾ ಚುನಾವಣೆಯ ಮತದಾನ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಫಲಿತಾಂಶ ಏನಾಗಲಿದೆ ಎಂದು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರಿಗೆ ತಳಮಳ ಶುರುವಾಗಿದೆ. ಇನ್ನು ಐಎನ್ಡಿಎಗೆ ಈ ಬಾರಿ 295 ಸ್ಥಾನಗಳು ಬರಲಿದ್ದು, ಸರ್ಕಾರ ರಚನೆಗೆ ಮಾಡುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಆದ್ರೆ, ಇತ್ತ ಕರ್ನಾಟಕ ಕಾಂಗ್ರೆಸ್ ಶಾಸಕರೊಬ್ಬರು ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.ಕೋಲಾರ, (ಜೂನ್ 03): ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ (ಜೂನ್ 04) ಪ್ರಕಟವಾಗಲಿದ್ದು, ಎಕ್ಸಿಕ್ ಪೋಲ್ಗಳು ಈ ಬಾರಿ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೆ ಬರುತ್ತೆ. ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿವೆ. ಇನ್ನು ಈ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಅನ್ನೋದು ನನಗೂ ಗೊತ್ತು ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿಂದು ಎಕ್ಸಿಟ್ ಪೋಲ್ ಬಗ್ಗೆ ಮಾತನಾಡಿರುವ ಕೊತ್ತೂರು ಮಂಜುನಾಥ್, ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಅನ್ನೋದು ನನಗೂ ಗೊತ್ತು . ನಾನು ಕಾಂಗ್ರೆಸ್ ಶಾಸಕನಾದರೂ ನಿಜ ಹೇಳಬೇಕು, ಸುಳ್ಳು ಹೇಳಬಾರದು. ಕೇಂದ್ರದಲ್ಲಿ ಬಿಜೆಪಿ ಬರುವ ಬಗ್ಗೆ ಮೊದಲೇ ಗೊತ್ತಿರುವ ವಿಚಾರವಾಗಿದೆ. ಈ ಬಾರಿ ಬಿಜೆಪಿ ಬರಲಿ ಮುಂದಿನ ಚುನಾವಣೆ ನಮ್ಮ ಗುರಿ. ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ. ರಾಜ್ಯದಲ್ಲಿ ಶೇಕಡಾ 50-50 ಬರಲಿದೆ. ಕೋಲಾರದಲ್ಲಿ 29 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಅವರು ಪರೋಕ್ಷವಾಗಿ ಕೇಂದ್ರದಲ್ಲಿ ಐಎನ್ಡಿಎ ಅಧಿಕಾರಕ್ಕೆ