ಚಿರತೆಯೊಂದು ಖಾಸಗಿ ಹೋಟೆಲ್ಗೆ ನುಗ್ಗಿರುವ ಘಟನೆ, ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹೋಟೆಲ್ ಕನೋಟಾ ಕ್ಯಾಸಲ್ಗೆ ಚಿರತೆಯೊಂದು ನುಗ್ಗಿದ್ದು, ಕೊಠಡಿಯೊಂದರಲ್ಲಿ ಅಡಗಿ ಕುಳಿತಿತ್ತು.
ಚಿರತೆ ಕಂಡು ಸಿಬ್ಬಂದಿ ತಕ್ಷಣ ಕೊಠಡಿ ಬಾಗಿಲನ್ನು ಮುಚ್ಚಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಅಲ್ಲಿ ತಂಗಿದ್ದ ಅತಿಥಿಗಳನ್ನು ಬೇರೊಂದು ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ.
ಬಳಿಕ ಹೋಟೆಲ್ ಸಿಬ್ಬಂದಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಅರವಳಿಕೆ ನೀಡಿ ಚಿರತೆಯನ್ನ ಸೆರೆಹಿಡಿದ್ದಾರೆ.