ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಅರಣ್ಯದಂಚಿನ ಶೀಗನಳ್ಳಿ ಗ್ರಾಮದ ಸುತ್ತಮುತ್ತಲು ಪ್ರತ್ಯಕ್ಷವಾದ ಚಿರತೆ ಸೆರೆ ಹಿಡಿದು ಬೋನಿಗೆ ಕೆಡವಿದ್ದಾರೆ.ಗುರುವಾರ ತಡರಾತ್ರಿ ಚಿರತೆ ಕಂಡು ಅಲ್ಲಿನ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಬೋನು ಸಮೇತ ಸ್ಥಳಕ್ಕೆ ಬಂದು ಕೆಲವು ಗಂಟೆಗಳ ಕಾಲ ಕಾರ್ಯಚರಣೆ ಮಾಡಿ ನಂತರ ಬೋನಿಗೆ ಬಿಳ್ಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆ ಕಂಡು ಅಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದರು ಈಗ ಚಿರತೆ ಸೆರೆ ಸಿಕ್ಕ ಕಾರಣ ನಿಟ್ಟುಸಿರು ಬಿಟ್ಟಂತಾಗಿದೆ. ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಧಿಕಾರಿ ಎಂ. ವೈ ಛಲವಾದಿ, ಸಿದ್ದಪ್ಪ ದೇವಣ್ಣವರ, ಮಾತೇಶ ಮಾಳಗಿ, ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.