ಬೆಂಗಳೂರು:- ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ಆಗಿದ್ದು, ವಿಚಾರಣೆಗೆ ಬಂದಿದ್ದ ಎಲ್ಲರೂ ಎಸ್ಐಟಿ ವಶಕ್ಕೆ ಪಡೆಯಲಾಗಿದೆ.
ಇದುವರೆಗೆ ನಡೆದಿದ್ದ ತನಿಖೆ ಆಧಾರದ ಮೇಲೆ ಈಗ ಸಿಐಡಿಯಲ್ಲಿಯೇ ಎಸ್ಐಟಿ ಮತ್ತೊಂದು ಹೊಸ ಎಫ್ಐಆರ್ ದಾಖಲಿಸಿದ್ದು, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಗಳ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಕಸ್ಟಡೊಯಲ್ಲಿ ತಾಂತ್ರಿಕ ವಸ್ತುಗಳು ಇದ್ದಾಗ ಅದನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸದ್ಯ ಹೊಸಾ ಎಫ್ಐಆರ್ ಆದ ಬಳಿಕ ವಿಚಾರಣೆಗೆ ಆಗಮಿಸಿದ್ದ ಎಲ್ಲರನ್ನು ಎಸ್ಐಟಿ ವಶದಲ್ಲೇ ಇಟ್ಟುಕೊಂಡಿರುವುದು ಸಂಚಲನ ಮೂಡಿಸಿದೆ. ಅಲ್ಲದೇ ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ವಶಕ್ಕೆ ಪಡೆದುಕೊಂಡವರ ವಿಚಾರಣೆ ವೇಳೆ ಏನೆಲ್ಲಾ ಮಾಹಿತಿ ಹೊರಬರುತ್ತೆ? ಆಗ ಎಸ್ಐಟಿಯ ಮುಂದಿನ ನಡೆಯೇನು ಎನ್ನುವುದೇ ಕುತೂಹಲ ಮೂಡಿಸಿದೆ.
ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿತ್ತು. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ.
ಇನ್ನು ಈ ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರುಗಳ ಹೆಸರುಗಳು ಕೇಳಿಬಂದಿದ್ದವು. ಇದರಿಂದ ಈ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ಯು. ಇದೀಗ ಎಸ್ಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ