ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಒಂಟಿಕೊಪ್ಪಲು ವೆಂಕಟರಮಣ ಸ್ವಾಮಿ ದೇಚಾಲಯದ ಸಮೀಪದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಭಾರೀ ಪ್ರಮಾಣದ ನೀರು ಪೋಲಾಗಿದೆ. ಮೈಸೂರು ನಗರಕ್ಕೆ ಬೆಳಗೊಳ ಪಂಪ್ ಹೌಸ್ ನಿಂದ ನೀರು ಸರಬರಾಜು ಮಾಡುವ ಪ್ರಮುಖ ಪೈಪ್ ಲೈನ್ ಗೆ ಸಂಪರ್ಕವಿರುವ ನೀರಿನ ಕೊಳವೆ ಒಡೆದಿದ್ದರಿಂದ ರಸ್ತೆ ಮಧ್ಯೆ ನೀರು ಕಾರಂಜಿಯಂತೆ ಚಿಮ್ಮುತ್ತಾ ಪೋಲಾಗಿದ್ದನ್ನು ಕಂಡು ಸಾರ್ವಜನಿಕರು ಗಾಬರಿಗೊಂಡರು. ಈ ಸಂಬಂಧ ವಾಣಿವಿಲಾಸ ವಾಟರ್ ವರ್ಕ್ಸ್ ಸಿಬ್ಬಂದಿಗೆ ಕರೆ ಮಾಡಿದರೂ ಬಹಳ ಹೊತ್ತು ಅವರು ಸ್ಥಳಕ್ಕೆ ಬಾರದೆ ನೀರು ಪೋಲಾಯಿತು.
![Demo](https://prajatvkannada.com/wp-content/uploads/2023/08/new-Aston-Band.jpeg)