ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ ಅವರು, ರಾಮಮಂದಿರಕ್ಕಾಗಿ ಉಪವಾಸವಿದ್ದ ಪ್ರಧಾನಿ ಮೋದಿ ಉಪವಾಸ ಮಾಡಿದ್ದಾರೋ, ಇಲ್ಲವೋ ಎನ್ನುವುದು ಗ್ಯಾರಂಟಿ ಇಲ್ಲ. ಎಳನೀರು ಮಾತ್ರ ಕುಡಿದು ಉಪವಾಸ ಮಾಡಿದರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದರೆ ಮನುಷ್ಯ ಬದುಕಲು ಸಾಧ್ಯವಿಲ್ಲ. ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ. ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಓಡಾಡಿದ್ದಾರೆ. ಉಪವಾಸ ಇದ್ದ ಹಾಗೆಯೇ ಮೋದಿ ಕಾಣಲಿಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ದಿನಗಳಲ್ಲಿ ಪ್ರಧಾನಿ ಮೋದಿ ಉಪವಾಸ ಮಾಡಿದ್ದಾರೋ, ಇಲ್ಲವೋ ಎನ್ನುವುದರ ಮೇಲೆ ಅನುಮಾನವಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.