ಕೆಲವೊಂದು ಘಟನೆಗಳು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುತ್ತವೆ. ಇದೀಗ ಅಂಥದ್ದೇ ಘಟನೆಯೊಂದು ಅಮೇರಿಕಾದಲ್ಲಿ ನಡೆದಿದೆ. ಬ್ರೈನ್ ಡೆಡ್ ಆದ ವ್ಯಕ್ತಿಯ ಅಂಗಾಗಗಳನ್ನು ತೆಗೆಯಲು ಮುಂದಾದ ವೇಳೆ ವ್ಯಕ್ತಿ ಏಕಾಏಕಿ ಎದ್ದು ಕುಳಿತು ಅಚ್ಚರಿ ಮೂಡಿಸಿದ್ದಾನೆ.
ಅಮೇರಿಕಾದ ಕೆಂಟುಕಿಯ ಥಾಮಸ್ ಎಂಬ 36 ವರ್ಷದ ವ್ಯಕ್ತಿ ಮಾದಕ ವ್ಯಸನಿಯಾಗಿದ್ದ. ಮಿತಿ ಮೀರಿದ ಮಾದಕ ವಸ್ತು ಸೇವನೆಯಿಂದ ಆತನ ಬ್ರೈನ್ಡೆಡ್ ಆಗಿದೆ ಎಂದು ವೈದ್ಯೆರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮೃತನ ಕುಟುಂಬಸ್ಥರು ಆತನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಅಂದರಂತೆ ವೈದ್ಯಕೀಯ ತಂಡ ಮೃತ ವ್ಯಕ್ತಿಯ ಅಂಗಾಂಗ ದಾನದ ಕಾರ್ಯದಲ್ಲಿ ಮುಂದಾಗಿದೆ.
ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ಆತ ಎದ್ದು ಕುಳಿತಿದ್ದಾನೆ. ಈ ಪ್ರಕರಣ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು 2021ರಲ್ಲಿ. ಇದೀಗ ಮತ್ತೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.