ನೆದರ್ಲ್ಯಾಂಡ್ ನ ರಾಜಧಾನಿ ಆಮ್ಸ್ಟರ್ಡಾಂನ ಶಿಫೋಲ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್ನೊಳಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಡೆನ್ಮಾರ್ಕ್ ನ ಬಿಲುಂಡ್ ಗೆ ಪ್ರಯಾಣಿಸಲು ಸಿದ್ಧಗೊಂಡಿದ್ದಾಗ ವಿಮಾನದ ರೆಕ್ಕೆಯ ಮೇಲೆ ಓಡಿಬಂದ ವ್ಯಕ್ತಿಯೊಬ್ಬ ಕಾಲುಜಾರಿ ಇಂಜಿನ್ ನ ಒಳಗಿರುವ ಕೂಲಿಂಗ್ ಫ್ಯಾನ್ ನ ರೆಕ್ಕೆಗಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಇದು ಆಕಸ್ಮಿಕ ಅಪಘಾತವೇ ಅಥವಾ ಆತ್ಮಹತ್ಯೆ ಪ್ರಕರಣವೇ ಎಂಬುದು ದೃಡಪಟ್ಟಿಲ್ಲ. ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.