ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಂದೆಯೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈಕೋರ್ಟ್ ಆವರಣದಲ್ಲೇ ನಡೆದಿದೆ.
ಇಂದು ವಿಚಾರಣೆಯ ಅಂತ್ಯದ ವೇಳೆಗೆ ನ್ಯಾಯಮೂರ್ತಿಗಳ ಮುಂದೆ ಬಂದ ವ್ಯಕ್ತಿ ತನ್ನ ಪ್ರಕರಣದ ಬಗ್ಗೆ ಹೇಳಿ ಕೈ ಕೊಯ್ದುಕೊಂಡಿದ್ದು ಈ ವೇಳೆ ನ್ಯಾಯಮೂರ್ತಿಗಳು ತಕ್ಷಣ ಆಸ್ಪತ್ರೆಗೆ ಸೇರಿಸಲು ಸೂಚನೆ ನೀಡಿದರು.
ಅರ್ಜಿಯೊಂದನ್ನು ಕೋರ್ಟ್ ಸಿಬ್ಬಂದಿಗೆ ನೀಡಿ ಸಣ್ಣದಾದ ಚೂಪಾದ ವಸ್ತುವಿನಿಂದ ಕೊಯ್ದುಕೊಂಡಿದ್ದಾನೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಶ್ರೀನಿವಾಸ್ ಅವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹೈಕೊರ್ಟ್ಗೆ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಭೇಟಿ ನೀಡಿದ್ದಾರೆ. ವ್ಯಕ್ತಿಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.