ಬೆಂಗಳೂರು: ಮನೆಯಲ್ಲಿ ಮಹಾಲಯ ಅಮಾವಾಸ್ಯೆಯ ಹಬ್ಬ ಮಾಡಿ, ಪೂಜೆ ಮಾಡಿ ಬಳಿಕ ಮದ್ಯಸೇವನೆ ಮಾಡುವಾಗ ಸ್ನೇಹಿತರ ನಡುವೆ ಜಗಳವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಕೀರ್ತಿ (37) ಎಂಬಾತ ಮೂರ್ತಿ (52) ಎಂಬುವವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬೆಂಗಳೂರಿನ ಸಣ್ಣೇನ ಹಳ್ಳಿಯಲ್ಲಿ ಘಟನೆ ನಡೆದಿದ್ದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಒಂದೇ ಏರಿಯಾದವರು. ಹಬ್ಬ ಮುಗಿಸಿ ಮದ್ಯ ಸೇವನೆಗೆ ಜೊತೆಯಾಗಿ ಕೂತಿದ್ದಾಗ ಜಗಳವಾಗಿ ಕೊಲೆ ನಡೆದಿದೆ. ಘಟನೆ ಬಳಿಕ ಆರೋಪಿ ಕೀರ್ತಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ. ಮೃತ ಮೂರ್ತಿ ಹಸು ಸಾಕಾಣಿಕೆ ಮಾಡುತಿದ್ದ, ಇನ್ನು ಆರೋಪಿ ಕೀರ್ತಿ ಸಹ ಪರಿಚಿತ, ಸ್ನೇಹಿತ ಸಹ ಆಗಿದ್ದು ಫೈನಾನ್ಸ್ ವ್ಯವಹಾರ ನಡೆಸುತಿದ್ದ ಎಂದು ತಿಳಿದುಬಂದಿದೆ.