ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳೆ ಎಚ್ಚರ, ಎಚ್ಚರ. ನಗರದಲ್ಲಿ ಯಮನ ರೂಪದಲ್ಲಿ ಕಾದು ಕುಳಿತಿರುವ ವಿದ್ಯುತ್ ತಂತಿಗಳು ಅನೇಕ ಕಡೆ ಪತ್ತೆಯಾಗಿವೆ. ಕೊಂಚ ಯಾಮಾರಿದ್ರೂ ಯಮಲೋಕ ಫಿಕ್ಸ್. ಇಂತಹದೊಂದು ಆಘಾತಕಾರಿ ಅಂಶವನ್ನ ಖುದ್ದು ಬೆಸ್ಕಾಂ ಅಧಿಕಾರಿಗಳ ಅಂಕಿ ಅಂಶವೇ ಬಯಲು ಮಾಡಿದೆ.
ಕಾಡುಗೋಡಿ ಪೊಲೀಸ್ ಠಾಣಾ ಲಿಮಿಟ್ಸ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘೋರ ದುರಂತದ ಬಗ್ಗೆ ನಿಮ್ಗೆಲ್ಲಾ ಗೊತ್ತಿರ್ಬೋದು. ಅಂದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಯಿ & ಮಗು ಬಲಿಯಾಗಿದ್ರು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಕೂಡ ಸರ್ವೇ ಮಾಡಿ, ಇಂತಹ ಡೇಂಜರಸ್ ಜಾಗಗಳನ್ನ ಪತ್ತೆ ಮಾಡಿ, ಅವುಗಳನ್ನ ಸರಿಪಡಿಸುವ ಕೆಲಸ ಮಾಡ್ತಿದೆ. ಆದರೆ ವಿಚಾರ ಏನಂದ್ರೆ ಇನ್ನೂ ಕೂಡ ಬೆಸ್ಕಾಂ ವ್ಯಾಪ್ತಿಯಲ್ಲಿ 30,243 ಡೇಂಜರ್ ಜಾಗ ಇದ್ದು, ಅವುಗಳನ್ನ ಸರಿಪಡಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನಲ್ಲೂ ಇಂತಹ ಡೇಂಜರಸ್ ಜಾಗಗಳ ಪಟ್ಟಿ ಕೂಡ ದೊಡ್ಡದಿದೆ. ಜನವರಿ ಕೊನೆಯೊಳಗೆ ಎಲ್ಲಾ ಡೇಂಜರಸ್ ಸ್ಪಾಟ್ ಗಳನ್ನು ಕ್ಲಿಯರ್ ಮಾಡ್ತಿವಿ ಎಂದು ಬೆಸ್ಕಾಂ ಜನರಲ್ ಮ್ಯಾನೇಜರ್ ಎಸ್.ಟಿ ಶಾಂತಮಲ್ಲಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ ಮೋಹನ್ ಕುಮಾರ್ ಅಮಾಯಕರ ಪ್ರಾಣ ಹೋಗುವವರೆಗೂ ಬೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗಹರಿಸುವುದಿಲ್ಲ ತಮ್ಮ ಹೆಂಡತಿ ಮಕ್ಕಳಿಗೆ ಸಮಸ್ಯೆ ಆದರೆ ಗೊತ್ತಾಗುತ್ತದೆ. ಸರ್ಕಾರದ ಸಂಬಳ ತೆಗೆದುಕೊಂಡು ಆಫೀಸ್ ನಲ್ಲಿ ಸೈಲೆಂಟ್ ಆಗಿದ್ರೆ ಹೇಗೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.