ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಸದ್ಯ ನಿನಗಾಗಿ ಧಾರವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಧಾರವಾಹಿ ಮೂಲಕ ಸಾಕಷ್ಟು ಖ್ಯಾತಿ ಘಳಿಸುತ್ತಿರುವ ನಟಿ ಇದೀಗ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ದುಬೈಗೆ ತೆರಳಿದ್ದ ದಿವ್ಯಾ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡಿ ಬಂದಿದ್ದರು. ವಿಶೇಷವಾಗಿ ಮರಳಿನಲ್ಲಿ ಬಳಸೋ ಸ್ಯಾಂಡ್ ಮೋಟರ್ ಬೈಕ್ ಅನ್ನೂ ಏರಿ ಮನಸೋಯಿಚ್ಛೆ ಸುತ್ತಾಡಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ದಿವ್ಯಾ ಮನೆಗೆ ಹೊಸ ದುಬಾರಿ ಕಾರು ಬಂದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಟಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಕಾರು ಖರೀದಿಸುವ ವೇಳೆ ದಿವ್ಯಾಗೆ ಅರವಿಂದ್ ಕೆ ಪಿ ಕೂಡ ಸಾಥ್ ನೀಡಿದ್ದಾರೆ. ದಿವ್ಯಾ ಉರುಡುಗ ಟಾಟಾ ಹ್ಯಾರಿಯರ್ ಕಾರನ್ನು ಮನೆಗೆ ತಂದಿದ್ದಾರೆ. ಟಾಟಾ ಹ್ಯಾರಿಯರ್ ಕಾರಿನ ಬೇಸಿಕ್ ಬೆಲೆ 19 ಲಕ್ಷ ರೂಪಾಯಿ ಇಂದ ಆರಂಭ ಆಗಿ, 32 ಲಕ್ಷ ರೂಪಾಯಿವರೆಗೂ ಇದೆ.
ಬಿಗ್ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಬಿಗ್ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು, ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ನಟಿ ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.