ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta Biological Park) ಮೃಗಾಲಯ ಕುಟುಂಬಕ್ಕೆ ಇಂದು ಹೊಸ ಅಥಿತಿ ಆಗಮನವಾಗಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 21 ಏಪ್ರಿಲ್ 2023 ರಂದು ಅರಿಗ್ನಾರ್ ಅಣ್ಣಾ ಜಿಯೋಲಾಜಿಕಲ್ ಪಾರ್ಕ್, ವಂಡಲೂರ್, ಚೆನ್ನೈ ಇಂದ ರಾಯಲ್ ಬಂಗಾಳ ಬಿಳಿಯ ಗಂಡು ಹುಲಿಯನ್ನು ತರಲಾಗಿದೆ.
ಬನ್ನೇರುಘಟ್ಟ ಪಾರ್ಕ್ ನಲ್ಲಿ(Bannerghatta Biological Park) 2020 ರಲ್ಲಿ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಗಂಡು ಸಿಂಹ ಶೇರ್-ಯಾರ್ ಅನ್ನು ತಮಿಳುನಾಡಿನ ವಂಡಲೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು.ಈಗ ವಂಡಲೂರು ಮೃಗಾಲಯದ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿಯನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿಗೆ ತರಲಾಗಿದೆ.ಹುಲಿಯು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಇರಿಸಲಾಗಿದೆ. ಜೊತಗೆ ಹೂಸ ಸದಸ್ಯ ನನ್ನು ಡಾಕ್ಟರ್ ಗಳ ತಂಡ ನಿರಂತರ ವೀಕ್ಷಣೆಯಲ್ಲಿರಿಸಿದ್ದಾರೆ.