ಬೆಂಗಳೂರು ಮಹಾನಗರದ ಹೆಗ್ಗುರುತುಗಳಲ್ಲಿ ಒಂದಾಗಿರುವ ರವೀಂದ್ರ ಕಲಾಕ್ಷೇತ್ರಕ್ಕೆ ‘ ವಜ್ರ’ದ ಹೊಳಪು ಹೊಂದಿರುವ ಕಲಾಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದ್ದು ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಕಲಾ ಕ್ಷೇತ್ರಕ್ಕೆ ನ್ಯೂ ಲುಕ್ ತಂದಿದ್ದು ಆಧುನಿಕ ಟಚ್ ಕೊಡಲ ಕನ್ನಡ & ಸಂಸ್ಕೃತಿ ಇಲಾಖೆ ಪ್ಲ್ಯಾನ್ ಮಾಡಿದ್ದು ₹24 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರದ ಅಭಿವೃದ್ಧಿಗೆ ಪ್ಲ್ಯಾನ್ ಆದರೆ ಇದಕ್ಕೆ ಸಂಸ್ಕೃತಿ ಇಲಾಖೆಯ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಇಲಾಖೆಯಿಂದ ಪ್ರಸ್ತಾವನೆ
ಕಲೆಗಳು, ಪೌರಾಣಿಕ ನಾಟಕಗಳು ಪ್ರದರ್ಶನವಾಗುವಾಗುವ ಜಾಗ
ಇಂತಹ ರವೀಂದ್ರ ಕಲಾಕ್ಷೇತ್ರ ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ
ಕೇಂದೀಕೃತ ಹವಾನಿಯಂತ್ರ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ಅಳವಡಿಕೆಗೆ ಚಿಂತನೆ
ಇದಕ್ಕೆ ಕನ್ನಡ & ಸಂಸ್ಕೃತಿ ಇಲಾಖೆ ಮುಂದಾಗಿದ್ದು,
₹24 ಕೋಟಿ ವೆಚ್ಚವಾಗಬಹುದೆಂದು ಅಂದಾಜು
ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಇಲಾಖೆ
ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ಬಳಿಕ ನವೀಕರಣ ಪ್ರಕ್ರಿಯೆ ಪ್ರಾರಂಭ
ನವೀಕರಣ ಯಾಕೆ?
ಸಭಾಂಗಣದಲ್ಲಿ ರಂಗಕಲಾವಿದರಿಗೆ ಬೇಕಾದ ಯಾವುದೇ ಸೌಕರ್ಯಗಳು ಸರಿಯಾಗಿ ಇಲ್ಲ
ರಂಗಕಲಾವಿದರಿಗೆ ಮುಖ್ಯವಾಗಿ ಬೇಕಾಗಿರುವುದು ವಿಸ್ತಾರವಾದ ಸಭಾಂಗಣ
ಲೈಟಿಂಗ್ಸ್, ಸ್ಕ್ರೀನಿಂಗ್, ನಾಟಕ ಅಭ್ಯಾಸ ಮಾಡಲು ವಿಸ್ತಾರವಾದ ಜಾಗ
ಶೌಚಾಲಯದ ವ್ಯವಸ್ಥೆ, ನಾಟಕದ ಒಂದಷ್ಟು ಪರಿಕರಗಳು
ಹಲವು ಸಮಸ್ಯೆಯನ್ನ ಬಹಳ ದಿನದಿಂದ ಎದುರಿಸುತ್ತಿದ್ದಾರೆ
ಕಲಾವಿದರು ಹಲವು ಬಾರಿ ಕನ್ನಡ & ಸಂಸ್ಕೃತಿ ಇಲಾಖೆಗೆ ದೂರು ನೀಡಿದ್ರಂತೆ
₹24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನ ಅಭಿವೃದ್ಧಿ ಪಡಿಸಲು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ ಅನ್ನೋ ಮಾತಿದೆ
ಸಂಸ್ಕೃತಿ ಇಲಾಖೆಯ ಈ ನಡೆಗೆ ರಂಗಕರ್ಮಿಗಳು,ಕಲಾವಿದರ ಆಕ್ರೋಶ
ರಂಗಕರ್ಮಿಗಳ ಆಕ್ರೋಶ ಯಾಕೆ..?
₹24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನ ಅಭಿವೃದ್ಧಿ ಮಾಡುವ ಅಗತ್ಯ ಇಲ್ಲ
ಅದರ ಬದಲು ಸೂಕ್ತ ತಂತ್ರಜ್ಞರನ್ನ ನೇಮಿಸಿ ಅವರಿಗೆ ವೇತನ ನೀಡಲಿ
ಧ್ವನಿ-ಬೆಳಕಿನ ವ್ಯವಸ್ಥೆಯನ್ನ ನವೀಕರಿಸಿ ಪ್ರದರ್ಶನಗಳಿಗೆ ಅನುವು ಮಾಡಿ ಕೊಡಲಿ
₹24 ಕೋಟಿ ವೆಚ್ಚದಲ್ಲಿ ನವೀಕರಣ ಮಾಡುವ ಬದಲು ,ಹೊಸ ರಂಗ ಮಂದಿರ ನಿರ್ಮಿಸಲಿ
ನವೀಕರಣದ ನೆಪದಲ್ಲಿ ಕಲಾಕ್ಷೇತ್ರವನ್ನ ಬಂದ್ ಮಾಡುವುದು ಬೇಡ
ನವೀಕರಣ ಕೆಲಸ ಪ್ರಾರಂಭವಾದ್ರೆ ಕಲಾಕ್ಷೇತ್ರಕ್ಕೆ ಬೀಗ ಬೀಳಲಿದೆ
ಇದರಿಂದ ನಾಟಕ & ಕಲಾ ಪ್ರದರ್ಶನಗಳಿಗೆ ಸಮಸ್ಯೆ, ಕಲಾವಿದರಲ್ಲಿ ಆತಂಕ
ಆತಂಕಕ್ಕೆ ಕಾರಣ
2018ರ ಮಲ್ಲತ್ತಹಳ್ಳಿಯ ಘಟನೆ ನೆನೆದು ರಂಗ ಕರ್ಮಿಗಳಲ್ಲಿ ಆತಂಕ
ಸಂಸ್ಕೃತಿ ಇಲಾಖೆಗೆ ಒಳಪಡುವ ಮಲ್ಲತ್ತಹಳ್ಳಿಯ ಕಲಾಗ್ರಾಮದ
ಸಾಂಸ್ಕೃತಿಕ ಸಮುಚ್ಚಯದಲ್ಲಿ 2018ರಲ್ಲಿ ಶಾರ್ಟ್ ಸರ್ಕ್ಯೂಟ್
ಅವಘಡದಲ್ಲಿ ಧ್ವನಿವರ್ಧಕ ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲು
3 ತಿಂಗಳಲ್ಲಿ ಸಿದ್ಧಪಡಿಸೋದಾಗಿ ಭರವಸೆ ನೀಡಿದ್ದ ಸಂಸ್ಕೃತಿ ಇಲಾಖೆ
3 ತಿಂಗಳ ಬದಲು ಮೂರುವರೆ ವರ್ಷ ತಗೊಂಡಿದ್ದ ಇಲಾಖೆ
ಮೂರುವರೆವರ್ಷ ಕಾಲ ಸಾಂಸ್ಕೃತಿಕ ಚಟುವಟಿಕೆ ಸ್ತಬ್ಧ
ಇದೇ ಕಾರಣಕ್ಕೆ ರವೀಂದ್ರ ಕಲಾಕ್ಷೇತ್ರ ಕೂಡ ನವೀಕರಣದ ನೆಪ ಬೇಡ
ವರ್ಷಾನುಗಟ್ಟಲೇ ಬಂದ್ ಅಗುತ್ತೆಂದು ಕಲಾವಿದರು& ರಂಗಕರ್ಮಿಗಳು ಆತಂಕ
ಅಲ್ಲದೇ ನವೀಕರಣಗೊಂಡ ಬಳಿಕ ಬಾಡಿಗೆ ಕೂಡ ಮತ್ತಷ್ಟು ಹೆಚ್ಚಾಗುವ ಭೀತಿ