ಬೆಂಗಳೂರು: ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಕಾಲೇಜು ವಿದ್ಯಾರ್ಥಿನಿ ಅಂಜನಾ (20) ಮತ್ತು ಶ್ರೀಕಾಂತ್ (25) ಸೂಸೈಡ್ ಮಾಡಿಕೊಂಡ ಜೋಡಿ. ವಿದ್ಯಾರ್ಥಿನಿಯು ತಲಘಟ್ಟಪುರ ಸಮೀಪದ ಅಂಜನಾಪುರ ವಾಸವಿದ್ದರೆ, ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿ.
ಇವರಿಬ್ಬರು ಜುಲೈ 1 ರಂದು ನಾಪತ್ತೆಯಾಗಿದ್ದರು.
ಕಳೆದ ಜುಲೈ 1ರಂದು ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ವಾಸವಿದ್ದ ವಿದ್ಯಾರ್ಥಿನಿ ಹಾಗೂ ಕೋಣನಕುಂಟೆ ನಿವಾಸಿ ಶ್ರೀಕಾಂತ್ ನಾಪತ್ತೆಯಾಗಿದ್ದರು. ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ನೈಸ್ ರಸ್ತೆ ಸಮೀಪದ ಕೆರೆಯಲ್ಲಿ ಇಬ್ಬರು ಯುವ ಪ್ರೇಮಿಗಳ ಶವ ತೇಲಿಕೊಂಡು ಬಂದಿದೆ.
ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ವಿದ್ಯಾರ್ಥಿನಿ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮೃತ ಶ್ರೀಕಾಂತ್ ಈ ಮೊದಲೇ ಮದುವೆಯಾಗಿದ್ದ. ಪಾರ್ಟ್ ಟೈಂ ಅಲ್ಲಿ ಆಟೋ ಡ್ತೈವರ್ ಆಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸುತ್ತಲೇ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲೇ ಶ್ರೀಕಾಂತ್ ಹಾಗೂ ಅಂಜನಾ ಮಧ್ಯೆ ಪ್ರೀತಿಯಾಗಿದೆ.
ಮದುವೆಯಾಗಿ ಪತ್ನಿಯಿದ್ದರೂ ತನ್ನದೇ ಕಾಲೇಜಿನ ಅಂಜನಾಳನ್ನು ಶ್ರೀಕಾಂತ್ ಪ್ರೀತಿಸಲು ಶುರು ಮಾಡಿದ್ದ. ಗಂಡನ ಮೊಬೈಲ್ನಲ್ಲಿ ಚಾಟಿಂಗ್ ನೋಡಿ ಶ್ರೀಕಾಂತ್ ಪತ್ನಿ ಪ್ರಶ್ನಿಸಿದ್ದಳು. ಹಿರಿಯರು ಹಲವು ಬಾರಿ ಶ್ರೀಕಾಂತ್ಗೆ ಬುದ್ದಿವಾದ ಹೇಳಿದ್ದರು ಆತ ತನ್ನ ಚಾಳಿ ಮುಂದುವರೆಸಿದ್ದ. ಕಾಲೇಜಿಗೆ ಹೋಗ್ತಿನೆಂದು ಲವ್ವರ್ ಅಂಜನಾಳ ಜೊತೆ ಶ್ರೀಕಾಂತ್ ಸುತ್ತಾಡ್ತಿದ್ದನಂತೆ.