ಚಾಮರಾಜನಗರ:- ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾದ ಘಟನೆ ಚಾಮರಾಜನಗರ ತಾಲೂಕು ಮಹಂತಾಳಪುರ ಗ್ರಾಮದಲ್ಲಿ ಜರುಗಿದೆ.
ಮಹಂತಾಳಪುರ ಗ್ರಾಮದ ಸಮೀಪದ ಕಲ್ಲು ಕ್ವಾರಿಯಲ್ಲಿ ಜೋಡಿ ಚಿರತೆ ಅಡಗಿತ್ತು.
ಪ್ರತಿನಿತ್ಯ ಎರಡು ಚಿರತೆಗಳೂ ಕೂಡ ರೈತರ ಸಾಕು ಪ್ರಾಣಿಗಳನ್ನು ಕೊಂದು ಆತಂಕ ಸೃಷ್ಟಿಸಿತ್ತು. ಕಳೆದ ಮೂರು ದಿನದ ಹಿಂದೆ ಕಲ್ಲು ಕ್ವಾರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿತ್ತು.
ಈ ವೇಳೆ ಸ್ಥಳಿಯರು ಮೊಬೈಲಿನಲ್ಲಿ ಚಿರತೆಗಳ ಚಲನವಲನದ ಬಗ್ಗೆ ವಿಡಿಯೋ ಮಾಡಿದ್ರು. ಇದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅರಣ್ಯ ಇಲಾಕೆ ಚಿರತೆ ಸೆರೆಗೆ ಬೋನು ಅಳವಡಿಸಿದ್ರು. ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದೀಗ ಆ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದು ಮತ್ತೊಂದು ಚಿರತೆಯನ್ನೂ ಕೂಡ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.