ನವದೆಹಲಿ: ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ಮೂಲಕ ಬಂದು ಕಸದ ಬುಟ್ಟಿಗೆ ಕಸ ಎಸೆದು ಮರಳಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ದೇವರೇ ನನ್ನನ್ನು ಇಷ್ಟು ಶ್ರೀಮಂತನಾಗಿ ಮಾಡಿಬಿಡು, ನಾನು ಹೆಲಿಕಾಪ್ಟರ್ ಮೂಲಕ ಕಸ ಎಸೆಯುವಂತಾಗಲಿ ಎಂದು ಹಲವರು ಬೇಡಿಕೊಂಡಿದ್ದಾರೆ. ಹೆಲಿಕಾಪ್ಟರ್ ಪೈಲೆಟ್ ಬಳಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾನೆ.
ನೆಲದ ಮೇಲೆ ಸಾಮಾನ್ಯ ಕಸದ ಬುಟ್ಟಿಯನ್ನು ಇಡಲಾಗಿತ್ತು. ಈ ಬುಟ್ಟಿಗೆ ಕಸ ಎಸೆಯಲು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿದ್ದ ಕಸವನ್ನು ಬುಟ್ಟಿಗೆ ಎಸೆದಿದ್ದಾನೆ. ಕಸದ ಬುಟ್ಟಿಗೆ ಕೆಲ ಎತ್ತರದಲ್ಲೇ ಹೆಲಿಕಾಪ್ಟರ್ನಲ್ಲಿ ಆಗಸದಲ್ಲೇ ಹಾರಾಡಿಸಿ ಕಸ ಎಸೆಯಲಾಗಿದೆ. ಬಳಿಕ ಮರಳಿದ್ದಾನೆ.
ಕೆಲವರು ಈತನ ಪೈಲೆಟ್ ಸ್ಕಿಲ್ ಕುರಿತು ಮಾತನಾಡಿದ್ದಾರೆ. ಉತ್ತಮ ಪೈಲೆಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕಸ ಎಸೆಯಲು ಹೆಲಿಕಾಪ್ಟರ್ ಬಳಸಿದ ಈ ಶ್ರೀಮಂತ ಯಾರು ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಶೂಟ್ ಆಗಿರುವ ಸ್ಥಳ ಹಾಗೂ ಇತರ ಮಾಹಿತಿಗಳು ಲಭ್ಯವಿಲ್ಲ. ಆದರೆ ವಿಡಿಯೋ ಮಾತ್ರ ಭಾರಿ ಸಂಚಲನ ಸೃಷ್ಟಿಸುತ್ತಿದೆ.