ಹಾವೇರಿ:- ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ NH 48 ರಲ್ಲಿ ಅವಘಡ ಒಂದು ಸಂಭವಿಸಿದೆ. ನಡುರಸ್ತೆಯಲೇ ಸ್ಕಾರ್ಪಿಯೋ ಕಾರೊಂದು ಧಗ ಧಗನೇ ಹೊತ್ತಿ ಉರಿದಿದೆ.
ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದ ನಾಲ್ವರು ಜೀವಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಗೋವಾಕ್ಕೆ ಹೋಗಿ ವಾಪಸ್
ಬೆಂಗಳೂರಿಗೆ ಮರಳುತ್ತಿದ್ದಾಗ ನಡೆದ ದುರ್ಘಟನೆ ಸಂಭವಿಸಿದೆ.
ತಾಂತ್ರಿಕ ದೋಷದಿಂದ ಸ್ಕಾರ್ಪಿಯೋ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.