ಪಟ್ಟಣದ ಸೈಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ನಿರ್ಲಕ್ಷದಿಂದ ಆರು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ತಾಲೂಕಿನ ಬೆಳಗನಹಳ್ಳಿ ಗ್ರಾಮದ ಶಿವರಾಜು ಕವಿತಾ ದಂಪತಿಗಳ ದ್ವಿತೀಯ ಪುತ್ರಿ ಒಂದನೇ ತರಗತಿ ಓದುತ್ತಿದ್ದ ತನುಷ ಮೃತ ಮಗು.
ಭಾನುವಾರ ರಾತ್ರಿ ಮಗು ವಾಂತಿ ಮಾಡಿಕೊಂಡ ಹಿನ್ನೆಲೆ ಹೆಚ್ಡಿ ಕೋಟೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದ ಸಂದರ್ಭದಲ್ಲಿ ಮಕ್ಕಳ ವೈದ್ಯರಿಲ್ಲದ ಕಾರಣ ಸೈಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಪೋಷಕರು ದಾಖಲಿಸಿದ್ದಾರೆ.
ಈ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರಾದ ದೀಪಕ್ ರವರು ಮಗುವನ್ನ ಪರೀಕ್ಷೆ ನಡೆಸಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ನಂತರ ಚಿಕಿತ್ಸೆಯನ್ನು ಸಹ ನೀಡಿದ್ದಾರೆ. ಈ ವೇಳೆ ರಕ್ತ ಪರಿಚಯ ಅವಶ್ಯಕತೆ ಇದೆ ಎಂದು ರಕ್ತ ಪರೀಕ್ಷೆಗೆ ಮಗುವನ್ನುಒಳಪಡಿಸಿದ್ದರು ನಂತರ ರಕ್ತ ಪರೀಕ್ಷೆಯ ವಿವರ ಬೆಳಗ್ಗೆಗೆ ಬರಲಿದೆ ಅಲ್ಲಿಯವರೆಗೂ ವಾರ್ಡ್ನಲ್ಲಿ ದಾಖಲಿಸುವಂತೆ ವೈದ್ಯರ ಸೂಚನೆ ಮೇರೆಗೆ ಪೋಷಕರು ಮಗುವನ್ನ ದಾಖಲಿಸಿದ್ದರು.
ಬೆಳಗ್ಗಿನ ವೇಳೆಗೆ ಮಗು ಲವಲವಿಕೆಯಿಂದ ಇದ್ದುದ್ದನ್ನ ಪೋಷಕರು ಗಮನಿಸಿ ಮಗು ಆರೋಗ್ಯವಾಗಿ ಇದೆ ಎಂದು ಭಾವಿಸಿದ್ದರು. ಮಧ್ಯಾಹ್ನ ಒಂದು ಗಂಟೆಯಲ್ಲಿ ಪೋಷಕರು ಪೋಷಕರು ಊಟ ತರಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ, ಇದರಿಂದ ಕುಪಿತಗೊಂಡ ಪೋಷಕರು ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಲು ಆಸ್ಪತ್ರೆ ವೈದ್ಯರು ಮತ್ತು ಆಡಳಿತ ಸಿಬ್ಬಂದಿಯೇ ಕಾರಣ ಎಂದು ದೂರಿದರು.