ದಾವಣಗೆರೆ: ಗುಂಡು ಹಾರಿಸಿಕೊಂಡು ದಾವಣಗೆರೆ ಮೂಲದ ಯೋಧ (soldier) ಆತ್ಮಹತ್ಯೆ ಮಾಡಿಕೊಂಡಿರುವಂತಹ ದುರಂತ ನಡೆದಿದೆ. ತಾಲೂಕಿನ ಹದಡಿ ಗ್ರಾಮದ ನಾಗರಾಜ್(32) ಆತ್ಮಹತ್ಯೆಗೆ ಶರಣಾದ ಯೋಧ.
ಕರ್ತವ್ಯದಲ್ಲಿದ್ದಾಗ ನಿನ್ನೆ ಬೆಳಗ್ಗೆ 4ಗಂಟೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಎನ್ನಲಾಗುತ್ತಿದೆ. ಪಂಜಾಬ್, ಹರಿಯಾಣ ಸೆಕ್ರೆಟರಿಯೇಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ 6 ವರ್ಷಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರು. ದಾವಣಗೆರೆ ಮೂಲದ ಶಿಲ್ಪಾ ಎಂಬುವರನ್ನ ಮದುವೆ ಆಗಿದ್ದು, ಇಬ್ಬರು ಪುತ್ರಿಯರಿದ್ದಾರೆ.
ನಾಗರಾಜ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸ್ವಗ್ರಾಮ ಹದಡಿಗೆ ತರಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ ರಿಷ್ಯಂತ ತಿಳಿಸಿದ್ದಾರೆ.