ನವದೆಹಲಿ: ಇಂದು ಹಳೇ ಸಂಸತ್ನಿಂದ ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್ ಆಗಲಿದೆ. ಇಂದು ಪ್ರಧಾನಿ ಮೋದಿ ಹೊಸ ಸಂಸತ್ ಭವನ ಪ್ರವೇಶಿಸಲಿದ್ದಾರೆ. ಕಾಲ್ನಡಿಗೆಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಹೊಸ ಸಂಸತ್ಗೆ ಮೋದಿ ಆಗಮಿಸಲಿದ್ದಾರೆ. ಹೊಸ ಸಂಸತ್ ಭವನದಲ್ಲಿ ಇಂದು ಮಧ್ಯಾಹ್ನ ಕಲಾಪ ಆರಂಭವಾಗಲಿದೆ. ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭ. ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.
ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಇಂದು ಹಳೇ ಸಂಸತ್ ಭವನದ ಮುಂದೆ ಸಂಸದರ ಫೋಟೋಶೂಟ್ ನಡೆಸಿದ್ದಾರೆ. ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳಿ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ(Parliament Special Session). ವಿಶೇಷ ಅಧಿವೇಶನದಲ್ಲಿ ಹಲವು ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಸಂಸತ್, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಬಿಲ್ ಆಗಿರುವ ಮಹಿಳೆಯರ ಮೀಸಲಾತಿ ವಿಧೇಯಕಕ್ಕೆ ಕೇಂದ್ರ ಸಂಪುಟ ಸಭೆ ಅಸ್ತು ಎಂದಿತ್ತು. ಹೀಗಾಗಿ ಇಂದು ಮಹಿಳಾ ಮೀಸಲಾತಿ ಸೇರಿದಂತೆ ಹಲವು ಬಿಲ್ ಮಂಡಿಸುವ ಸಾಧ್ಯತೆ ಇದೆ.