ಜನದಟ್ಟಣೆಯನ್ನು ನಿಯಂತ್ರಿಸಲು SMVT ಬೆಂಗಳೂರಿನಿಂದ ಉಧ್ನಾ ನಿಲ್ದಾಣಕ್ಕೆ ಏಕಮಾರ್ಗವಿಶೇಷ ರೈಲು ಸಂಚಾರಕ್ಕೆ ಭಾರತೀಯ ರೈಲ್ವೆ ತಿರ್ಮಾನಿಸಿದೆ. ಬೆಳಗಾವಿ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಹುಬ್ಬಳ್ಳಿ ಮೂಲಕ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಓಡಿಸಲಾಗುತ್ತಿದೆ.
ಬೆಂಗಳೂರು ಉದ್ನಾ ವಿಶೇಷ ಎಕ್ಸ್ಪ್ರೆಸ್ ರೈಲು ಸಂಖ್ಯೆ. 06577, ನಿನ್ನೆ ಜು.11 ರಂದು ಸಂಜೆ 06:15 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 11:40 ಗಂಟೆಗೆ ಉಧ್ನಾ ನಿಲ್ದಾಣವನ್ನು ತಲುಪಿದೆ. ಜೊತೆಗೆ ಈ ರೈಲು, ‘ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ಬೋಯಿಸರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ರೈಲು ಸಂಖ್ಯೆ. 08845 ಸಂತ್ರಗಚಿ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲು ಜುಲೈ 12 ರಿಂದ ಜುಲೈ 26, 2024 ರವರೆಗೆ ತನ್ನ ಸೇವೆಯನ್ನು ಮುಂದುವರೆಸಲಿದೆ. ಈ ಮೊದಲು ಈ ರೈಲನ್ನು ಜೂನ್ 28, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು.
2. ರೈಲು ಸಂಖ್ಯೆ. 08846 SMVT ಬೆಂಗಳೂರು-ಸಂತ್ರಗಾಚಿ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲು ಜುಲೈ 14 ರಿಂದ ಜುಲೈ 28, 2024 ರವರೆಗೆ ತನ್ನ ಸೇವೆಯನ್ನು ಮುಂದುವರೆಸಲಿದೆ. ಈ ಮೊದಲು, ಈ ರೈಲನ್ನು ಜೂನ್ 30, 2024 ರವರೆಗೆ ಓಡಿಸಲು ಸೂಚಿಸಲಾಗಿತ್ತು.