ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ಮಳೆಗಾಗಿ ರೈತರಿಂದ ವಿಭಿನ್ನವಾದ ಸಂಪ್ರದಾಯವನ್ನು ನೋಡಬಹುದು…ಬೀದರ ಜಿಲ್ಲೆಯಲ್ಲಿ ಸಕಾಲಕ್ಕೆ ಬಾರದ ಮಳೆರಾಯನ ಆಗಮನಕ್ಕೆ ಹುಲಸೂರ ಪಟ್ಟಣದಲ್ಲಿ ಸಕಾಲಕ್ಕೆ ಮೃಘ ನಕ್ಷತ್ರದಂದು ಮಳೆ ಬಾರದಿದ್ದರೆ ಹುಲಸೂರು ಪಟ್ಟಣದ ಓಣಿಯ ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿ ಹರಕೆ ತೀರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಪಂಚಾಳ ಎನ್ನುವರ ಮನೆಯ ಆವರಣದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಓಣಿಯ ಮಹಿಳೆಯರು, ಬೀಗರು ,ನೆಂಟರ ರೂಪದಲ್ಲಿ ಮದುವೆ ಹಾಜರಾಗುವುದು ವಿಶೇಷ.
ತಂದನಂತರ ಹಾಡುಗಳು ಹಾಡುವ ಮುಖಾಂತರ ಗೊಂಬೆಗೆ ಅರಿಶಿನ, ಎಣ್ಣೆಯನ್ನು ಹಚ್ಚಿ , ಸ್ನಾನ ಮಾಡಿಸಿ, ಪುರುಣಿತಿ ಓದುತ್ತಾ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ತೆರಳಿ ದೇವರ ದರ್ಶನ ಪಡೆದು,ಮದುವೆ ಮಂಟಪಕ್ಕೆ ಆಗಮಿಸಿ ಶ್ರಂಗಾರ ಗೋಳಿಸಿದ ಮಂಟಪದಲ್ಲಿ ಅಕ್ಷತೆಯ ಹಾಡು ಹಾಡುವ ಮುಖಾಂತರ ವಿಶೇಷ ಗೋಂಬೆಗಳ ಮದುವೆ ಮಾಡುತ್ತಾರೆ. ನಂತರ ಬೀಗರಿಗೆ,ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ.