ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಬಂತು, ಬರಗಾಲ ತಂತು ಎಂದು ಮಾತಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಜೂನ್ ಕಳೆಯುತ್ತ ಬಂದರು ಮಳೆಯಾಗಿಲ್ಲ. ನದಿಗಳು, ಜಲಾಶಯಗಳು ಬತ್ತಿ ಹೋಗಿವೆ. ಹಳ್ಳಿ, ನಗರ ಪ್ರದೇಶಗಳಲ್ಲಿ ನೀರಿಗೆ ತತ್ವಾದ ಎದುರಾಗಿದೆ.
ಈ ನಡುವೆ ಜನರು ಮಳೆಗಾಗಿ ಇನ್ನಿಲ್ಲದಂತೆ ಪ್ರಯತ್ನಗಳನ್ನ ಮಾಡ್ತಿದ್ದಾರೆ. ಕತ್ತೆ ಮದುವೆ, ಕಪ್ಪೆ ಮದುವೆ, ದೇವರಲ್ಲಿ ಪ್ರಾರ್ಥನೆ ಸೇರಿದಂತೆ ಮಳೆಗಾಗಿ ಹಪಹಪಿಸುತ್ತಿದ್ದಾರೆ. ಈ ನಡುವೆ ಬರದ ನಾಡು ಅಂತಲೆ ಕುಖ್ಯಾತಿ ಗಳಿಸಿರುವ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ವಿಚಿತ್ರ ಆಚರಣೆಯೊಂದು ನಡೆದಿದೆ. ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ.
ಶವದ ಬಾಯಿಗೆ ನೀರು ಬಿಟ್ಟರೆ ಮಳೆ ಆಗಮನ: ಸ್ಮಶಾನದಲ್ಲಿ ಕೆಲವು ಶವಗಳು ನೀರಿಗಾಗಿ ಬಾಯಿತೆರೆದು ಕುಳಿತಿರುತ್ತವೆ. ಹೀಗಾಗಿ, ಅಂತಹ ಶವಗಳಿಗೆ ನೀರು ಬಿಡದೇ ಹೂತು ಹಾಕಿದ್ದರೆ ಊರಿಗೆ ಮಳೆ ಬರುವುದಿಲ್ಲ ಎಂಬ ವಿಚಿತ್ರ ನಂಬಿಕೆಯಿದೆ. ಹೀಗಾಗಿ, ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದವರ ಮೃತದೇಹಗಳನ್ನು ಮಣ್ಣು ಮಾಡಿ ಸಮಾಧಿ ಮಾಡಲಾಗಿದ್ದ ಶವಗಳ ಸಮಾಧಿಗೆ ರಂಧ್ರವನ್ನು ಕೊರೆದು ಶವದ ಬಾಯಿಗೆ ನೀರು ಹೋಗುವಂತೆ ಟ್ಯಾಂಕರ್ ಮೂಲಕ ನೀರನ್ನು ಬಿಡಲಾಗುತ್ತದೆ. ಟ್ಯಾಂಕರ್ ಮೂಲಕ ಗ್ರಾಮದ ಸ್ಮಶಾನಕ್ಕೆ ತೆರಳಿದ ಯುವಕರು,
ಗ್ರಾಮದ ಮುಖಂಡರು ಗೋರಿಯೊಂದರ ಮೇಲೆ ಹಾರಿಯಿಂದ ರಂದ್ರ ಕೊರೆದಿದ್ದಾರೆ. ಬಳಿಕ ಅದ್ರಲ್ಲಿ ಟ್ಯಾಂಕರ್ ನ ಪೈಪ್ ಮೂಲಕ ನೀರು ಹಾಕಿದ್ದಾರೆ. ಪೈಪ್ ಮೂಲಕ ಹಾಕುವ ನೀರು ಶವ ಬಾಯಿ ತಲುಪುತ್ತಂತೆ. ಗೋರಿಯಲ್ಲಿರೋ ಶವದ ಬಾಯಿಗೆ ಹೀಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇದೆ. ಹೀಗೆ ನೀರು ರಂದ್ರಗಳ ಮೂಲಕ ಗೋರಿಯಲ್ಲಿ ಹೂತಿರುವ ಶವದ ಬಾಯಿಗೆ ಹೋಗಿ ತಲುಪುತ್ತೆ. ಹೀಗೆ ನೀರು ತಲುಪಿದಾಗ ಆ ನೀರನ್ನ ಶವಗಳು ಸೇವಿಸುತ್ತವಂತೆ. ಬಾಯಿ ತೆರೆದು ಶವಗಳು ನೀರು ಕುಡಿಯುತ್ವೆ ಎನ್ನುವ ನಂಬಿಕೆ ಇದೆ. ನೀರು ಕುಡಿದು ಶವಗಳು ತೃಪ್ತಿಯಾದರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇಲ್ಲಿನ ಜನರಲ್ಲಿದೆ.
ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ. ಮಳೆಯಾಗಲಿ ಎಂದು ಕಲಕೇರಿಯ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ಗ್ರಾಮಸ್ಥರು ನೀರು ಬಿಟ್ಟಿದ್ದಾರೆ. ಗೋರಿಗೆ ರಂಧ್ರ ಕೊರೆದು ಶವದ ಬಾಯಿ ಇರುವ ಜಾಗಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಿದ್ದಾರೆ. ಗೋರಿಯೊಳಗಿನ ಶವದ ಬಾಯಿಗೆ ನೀರು ತಲುಪುವ ಹಾಗೇ ಪೈಪ್ ನಿಂದ ನೀರು ಬಿಟ್ಟ ಗ್ರಾಮಸ್ಥರು. ಹೀಗೆ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ನೀರು ಬಿಟ್ಟರೆ ಮಳೆಯಾಗುತ್ತೆ ಎನ್ನುವ ನಂಬಿಕೆಯಿದೆ. ಬರಗಾಲ ಉಂಟಾದಾಗ ಈ ಭಾಗದಲ್ಲಿ ಈ ವಿಚಿತ್ರ ಆಚರಣೆ ಮಾಡುವ ಪದ್ಧತಿ ಮಾಡುತ್ತಾ ಬಂದಿದ್ದಾರೆ. ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ.